ಟೋಕಿಯೊ (ಎಪಿ): ಸ್ವಿಟ್ಜರ್ಲೆಂಡ್‌ನ ಟೆನಿಸ್ ಆಟಗಾರ್ತಿ ಬೆಲಿಂಡಾ ಬೆನ್‌ಸಿಚ್, ಒಲಿಂಪಿಕ್ಸ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಗೆದ್ದ ಚಿನ್ನದ ಪದಕವನ್ನು ರೋಜರ್ ಫೆಡರರ್‌ಗೆ ಅರ್ಪಿಸಿದ್ದಾರೆ.
ಬೆಲಿಂಡಾ ಅವರು ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ ಸ್ವಿಟ್ಜರ್ಲೆಂಡ್‌ನ ಮೊದಲ ಆಟಗಾರ್ತಿ ಎನಿಸಿದ್ದಾರೆ. ಫೆಡರರ್, ಸ್ಟಾನಿಸ್ಲಾಸ್ ವಾವ್ರಿಂಕ ಮತ್ತು ಮಾರ್ಟಿನಾ ಹಿಂಗಿಸ್ ಅವರಿಂದ ಆಗದ್ದನ್ನು ಬೆಲಿಂಡಾ ಸಾಧಿಸಿದ್ದಾರೆ. ಹೀಗಾಗಿ ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
‘ಫೆಡರರ್ ಅವರು ಶನಿವಾರ ಬೆಳಿಗ್ಗೆ ಸಂದೇಶವೊಂದನ್ನು ಕಳುಹಿಸಿದ್ದರು. ನಿನ್ನ ಕನಸನ್ನು ಸಾಕಾರಗೊಳಿಸಿಕೊಳ್ಳಲು ಇದು ಸರಿಯಾದ ಸಮಯ. ಈ ಅವಕಾಶವನ್ನು ಕಳೆದುಕೊಳ್ಳಬೇಡ ಎಂದು ಬರೆದಿದ್ದರು. ಅವರ ಮಾತುಗಳು ಸರಿ ಅನಿಸಿತು. ಆ ಸಂದೇಶ ಓದಿದ ಬಳಿಕ ನನ್ನಲ್ಲಿ ಹೊಸ ಹುರುಪು ಮೂಡಿತ್ತು’ ಎಂದು ಬೆಲಿಂಡಾ ಹೇಳಿದ್ದಾರೆ.
‘ಫೆಡರರ್ ಬದುಕು ನಮಗೆಲ್ಲಾ ಸ್ಫೂರ್ತಿ. ಅವರು ಅಗಾಧ ಸಾಧನೆ ಮಾಡಿದ್ದಾರೆ. ಹೀಗಿದ್ದರೂ ಕೊಂಚವೂ ಅಹಂ ಇಲ್ಲ. ನಮ್ಮಂತಹ ಯುವ ಕ್ರೀಡಾಪಟುಗಳಿಗೆ ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಈ ಗೆಲುವು ಹಾಗೂ ಚಿನ್ನದ ಪದಕ ಅವರಿಗೇ ಸೇರಬೇಕು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.