ADVERTISEMENT

Australian Open: ಬೋಪಣ್ಣ ಜೋಡಿ ಫೈನಲ್‌ಗೆ ಲಗ್ಗೆ, ಪ್ರಶಸ್ತಿಗೆ ಒಂದೇ ಹೆಜ್ಜೆ!

ಪಿಟಿಐ
Published 25 ಜನವರಿ 2024, 9:43 IST
Last Updated 25 ಜನವರಿ 2024, 9:43 IST
<div class="paragraphs"><p>ರೋಹನ್ ಬೋಪಣ್ಣ</p></div>

ರೋಹನ್ ಬೋಪಣ್ಣ

   

(ಚಿತ್ರ ಕೃಪೆ: X/@AustralianOpen)

ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಫೈನಲ್‌ಗೆ ಲಗ್ಗೆ ಇಟ್ಟಿತು.

ADVERTISEMENT

ಇಂದು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತರಾಗಿರುವ ಬೋಪಣ್ಣ-ಎಬ್ಡೆನ್ ಜೋಡಿ, ಶ್ರೇಯಾಂಕರಹಿತ ಥಾಮಸ್ ಮಹಕ್ ಮತ್ತು ಜಾಂಗ್ ಝಿಜೆನ್ ವಿರುದ್ಧ 6-3, 3-6, 7-6 (10-7)ರ ಅಂತರದಲ್ಲಿ ಜಯ ಗಳಿಸಿತು.

ಫೈನಲ್‌ನಲ್ಲಿ ಬೋಪಣ್ಣ ಜೋಡಿ, ಇಟಲಿಯ ಸಿಮೊನ್ ಬೊಲೆಲಿ ಹಾಗೂ ಆ್ಯಂಡ್ರಿಯಾ ವ್ಯಾವಸೋರಿ ಸವಾಲನ್ನು ಎದುರಿಸಲಿದೆ.

ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮುಗಿದ ಬೆನ್ನಲ್ಲೇ ಹೊಸ ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆಗೊಳ್ಳಲಿದ್ದು, 43 ವರ್ಷದ ರೋಹನ್ ಬೋಪಣ್ಣ ಪುರುಷರ ಡಬಲ್ಸ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಅತಿ ಹಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ.

ರೋಹನ್ ಬೋಪಣ್ಣ ಎರಡು ಬಾರಿ ಅಮೆರಿಕನ್ ಓಪನ್ (2010, 2023) ಗ್ರ್ಯಾನ್‌ಸ್ಲಾಮ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದರು.

ಇದೇ ಮೊದಲ ಬಾರಿಗೆ ಆಸ್ಟ್ರೇಲಿಯನ್ ‌ಓಪನ್ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಬೋಪಣ್ಣ, ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. 2017ರ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ ಪ್ರಶಸ್ತಿ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.