ADVERTISEMENT

ಅಡಿಲೇಡ್‌ ಟೆನಿಸ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ರೋಹನ್ ಬೋಪಣ್ಣ- ರಾಮ್‌ಕುಮಾರ್

ಸಾನಿಯಾ–ನಾದಿಯಾಗೆ ನಿರಾಸೆ

ಪಿಟಿಐ
Published 7 ಜನವರಿ 2022, 13:30 IST
Last Updated 7 ಜನವರಿ 2022, 13:30 IST
ರಾಮ್‌ಕುಮಾರ್ ರಾಮನಾಥನ್‌– ಪ್ರಜಾವಾಣಿ ಸಂಗ್ರಹ ಚಿತ್ರ
ರಾಮ್‌ಕುಮಾರ್ ರಾಮನಾಥನ್‌– ಪ್ರಜಾವಾಣಿ ಸಂಗ್ರಹ ಚಿತ್ರ   

ಅಡಿಲೇಡ್‌: ಭಾರತದ ರೋಹನ್ ಬೋಪಣ್ಣ ಮತ್ತು ರಾಮ್‌ಕುಮಾರ್ ರಾಮನಾಥನ್ ಅವರು ಅಡಿಲೇಡ್ ಎಟಿಪಿ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಸಾನಿಯಾ ಮಿರ್ಜಾ ಮತ್ತು ಅವರ ಜೊತೆಗಾರ್ತಿ ಉಕ್ರೇನ್‌ನ ನಾದಿಯಾ ಕಿಚೆನೊಕ್‌ ಡಬ್ಲ್ಯುಟಿಎ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದರು.

ಶುಕ್ರವಾರ ನಡೆದ ಡಬಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಕರ್ನಾಟಕದ ಬೋಪಣ್ಣ ಮತ್ತು ರಾಮ್‌ಕುಮಾರ್‌ ಭರ್ಜರಿ ಜಯ ಸಾಧಿಸಿದರು. 6–1, 6–3ರಿಂದ ಫ್ರಾನ್ಸ್ ಮತ್ತು ಮೊನಾಕೊದ ಬೆಂಜಮಿನ್ ಬೊಂಜಿ ಮತ್ತು ಹ್ಯೂಗೊ ನಿಸ್‌ ಅವರನ್ನು ಪರಾಭವಗೊಳಿಸಿದರು.

ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಶ್ರೇಯಾಂಕರಹಿತ ಭಾರತದ ಜೋಡಿಯು ಸೆಮಿಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ, ಬೋಸ್ನಿಯಾ– ಮೆಕ್ಸಿಕೊ ಆಟಗಾರರಾದ ತೊಮಿಸ್ಲಾವ್‌ ಬ್ರಕಿಕ್‌ ಮತ್ತು ಸ್ಯಾಂಟಿಯಾಗೊ ಗೊಂಜಾಲೆಜ್ ಎದುರು ಆಡಲಿದ್ದಾರೆ.

ADVERTISEMENT

ಫೈನಲ್‌ ತಲುಪುವ ಸಾನಿಯಾ ಮತ್ತು ನಾದಿರಾ ಆಸೆ ಈಡೇರಲಿಲ್ಲ. ಈ ಜೋಡಿಯು ನಾಲ್ಕರ ಘಟ್ಟದ ಜಿದ್ದಾಜಿದ್ದಿನ ಸೆಣಸಾಟದಲ್ಲಿ1-6, 6-2, 8-10ರಿಂದ ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ ಮತ್ತು ಸ್ಟಾರ್ಮ್ ಸ್ಯಾಂಡರ್ಸ್‌ ಎದುರು ಎಡವಿದರು. ಒಂದು ತಾಸು ಐದು ನಿಮಿಷಗಳ ಕಾಲ ಈ ಪಂದ್ಯ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.