ಪ್ರತಿಷ್ಠಿತ ಅಮೆರಿಕ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸೋಲಿನ ಆಘಾತ ಎದುರಿಸಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರಿಗೆ ಕ್ಯಾಲೆಂಡರ್ ವರ್ಷದಲ್ಲಿ ಎಲ್ಲ ನಾಲ್ಕು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಅವಕಾಶ ಕೈತಪ್ಪಿದೆ. ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಜೊಕೊವಿಕ್ ವಿರುದ್ಧ 4-6, 4-6, 4-6ರ ಅಂತರದ ಗೆಲುವು ದಾಖಲಿಸಿದ ರಷ್ಯಾದ ಡ್ಯಾನಿಲ್ ಮಡ್ವೆಡೆವ್ ಚೊಚ್ಚಲ ಗ್ರ್ಯಾನ್ ಸ್ಲಾಮ್ ಕಿರೀಟಕ್ಕೆ ಮುತ್ತಿಟ್ಟರು. ಇದರೊಂದಿಗೆ ಜೊಕೊವಿಚ್, ದಾಖಲೆಯ 21ನೇ ಗ್ರ್ಯಾನ್ ಸ್ಲಾಮ್ ಗೆಲ್ಲುವ ಅವಕಾಶದಿಂದಲೂ ವಂಚಿತರಾಗಿದ್ದಾರೆ.
ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 3:51 IST
Last Updated 13 ಸೆಪ್ಟೆಂಬರ್ 2021, 3:51 IST
ಡ್ಯಾನಿಲ್ ಮಡ್ವೆಡೆವ್ ಅಮೆರಿಕ ಓಪನ್ ಚಾಂಪಿಯನ್ (ಬಲಭಾಗದಲ್ಲಿ), ನೊವಾಕ್ ಜೊಕೊವಿಚ್ ರನ್ನರ್-ಅಪ್ (ಎಡಭಾಗದಲ್ಲಿ)
ಚೊಕೊವಿಚ್ಗೆ ಕೈತಪ್ಪಿದ ಕ್ಯಾಲೆಂಡರ್ ಗ್ರ್ಯಾನ್ ಸ್ಲಾಮ್ ಸಾಧನೆ
ಡ್ಯಾನಿಲ್ ಮಡ್ವೆಡೆವ್ ಇದೇ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಫೈನಲ್ನಲ್ಲಿ ಜೊಕೊವಿಚ್ ವಿರುದ್ಧ ಎದುರಾದ ಸೋಲಿಗೆ ಸೇಡು ತೀರಿಸಿದ ಮಡ್ವೆಡೆವ್
2019ರ ಅಮೆರಿಕ ಓಪನ್ನಲ್ಲಿ ರನ್ನರ್-ಅಪ್ ಆಗಿದ್ದರು.
ಗ್ರ್ಯಾನ್ ಸ್ಲಾಮ್ನಲ್ಲಿ ಎರಡು ಬಾರಿ ಫೈನಲ್ನಲ್ಲಿ ಸೋತಿರುವ ಮಡ್ವೆಡೆವ್ ಮೂರನೇ ಪ್ರಯತ್ನದಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಮಡ್ವೆಡೆವ್ ಅಭಿನಂದಿಸಿದ ಜೊಕೊವಿಚ್
ಸೋಲಿನಿಂದ ಕೋಪ್ರೋದ್ತಿಕರಾಗಿ ರಾಕೆಟ್ ಚಚ್ಚಿ ಹಾಕಿದ ಜೊಕೊವಿಚ್
ಪ್ರಸಕ್ತ ಸಾಲಿನಲ್ಲೇ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೂರ್ನಿಗಳಲ್ಲಿ ಜೊಕೊವಿಚ್ ಗೆಲುವು ದಾಖಲಿಸಿದ್ದರು.