ADVERTISEMENT

ಡೇವಿಸ್ ಕಪ್ ಟೆನಿಸ್: ಪಾಕ್ ಎದುರು ಪಂದ್ಯ ಫೆ. 3ರಿಂದ, ಭಾರತ ತಂಡದಲ್ಲಿ ರಾಮಕುಮಾರ್

ಪಿಟಿಐ
Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
<div class="paragraphs"><p>ರಾಮಕುಮಾರ್ ರಾಮನಾಥನ್</p></div>

ರಾಮಕುಮಾರ್ ರಾಮನಾಥನ್

   

ನವದೆಹಲಿ: ಪಾಕಿಸ್ತಾನ ಎದುರಿನ ಡೇವಿಸ್ ಕಪ್ ವಿಶ್ವ ಮೊದಲ ಗುಂಪಿನ ಪ್ಲೇ ಆಫ್‌ ಪಂದ್ಯದಲ್ಲಿ ಆಡಲಿರುವ ಭಾರತದ ಆರು ಆಟಗಾರರ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ.

ಇದರೊಂದಿಗೆ ಭಾರತ ತಂಡವು 60 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಡೇವಿಸ್ ಕಪ್ ಪಂದ್ಯ ಆಡುವುದು ಬಹುತೇಕ ಖಚಿತವಾದಂತಾಗಿದೆ.

ADVERTISEMENT

ತಂಡದಲ್ಲಿ ರಾಮಕುಮಾರ್ ರಾಮನಾಥನ್, ಎನ್‌. ಶ್ರೀರಾಮ್ ಬಾಲಾಜಿ, ಯೂಕಿ ಬಾಂಭ್ರಿ, ನಿಕಿ ಕಲಿಯಂಡ ಪೂಣಚ್ಚ, ಸಾಕೇತ್ ಮೈನೇನಿ ಮತ್ತು ಮೀಸಲು ಆಟಗಾರ ದಿಗ್ವಿಜಯ್ ಪ್ರತಾಪ್ ಸಿಂಗ್ ಸ್ಥಾನ ಪಡೆದಿದ್ದಾರೆ.

ರಾಮನಾಥನ್ ಮತ್ತು ಪೂಣಚ್ಚ ಅವರು ಸಿಂಗಲ್ಸ್‌ ಆಡುವ ಸಾಧ್ಯತೆ ಇದೆ. ಯೂಕಿ, ಬಾಲಾಜಿ ಮತ್ತು ಮೈನೇನಿ ಅವರು ಡಬಲ್ಸ್‌ನಲ್ಲಿ ಆಡುವ ನಿರೀಕ್ಷೆ ಇದೆ.

ರೋಹಿತ್ ರಾಜಪಾಲ್ ಅವರು ನಾನ್‌ಪ್ಲೇಯಿಂಗ್ ಕ್ಯಾಪ್ಟನ್ ಮತ್ತು ಜೀಶನ್ ಅಲಿ ಮುಖ್ಯ ಕೋಚ್ ಆಗಿದ್ದಾರೆ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಪ್ರಕಟಣೆಯಲ್ಲಿ
ತಿಳಿಸಿದೆ.

ಭಾರತ ತಂಡವು ಕೊನೆಯ ಸಲ ಪಾಕಿಸ್ತಾನಕ್ಕೆ ತೆರಳಿದ್ದು 1964ರಲ್ಲಿ.  ಭಾರತ ಮತ್ತು ಪಾಕ್ ತಂಡಗಳು 2019ರಲ್ಲಿ ತಟಸ್ಥ ತಾಣದಲ್ಲಿ ಮುಖಾಮುಖಿಯಾಗಿದ್ದವು. ಮುಂದಿನ ವರ್ಷದ ಫೆಬ್ರುವರಿ 3 ಮತ್ತು 4ರಂದು ಪಂದ್ಯವು ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.