ADVERTISEMENT

ಟೆನಿಸ್ ವಿಶ್ವ ರ‍್ಯಾಂಕಿಂಗ್‌: ಅಗ್ರಸ್ಥಾನದಲ್ಲಿ ಉಳಿದ ನೊವಾಕ್‌, ಬಾರ್ಟಿ

ಏಜೆನ್ಸೀಸ್
Published 31 ಜನವರಿ 2022, 15:32 IST
Last Updated 31 ಜನವರಿ 2022, 15:32 IST
ನೊವಾಕ್ ಜೊಕೊವಿಚ್ –ಎಎಫ್‌ಪಿ ಚಿತ್ರ
ನೊವಾಕ್ ಜೊಕೊವಿಚ್ –ಎಎಫ್‌ಪಿ ಚಿತ್ರ   

ಪ್ಯಾರಿಸ್: ಆಸ್ಟ್ರೇಲಿಯನ್ ಓಪನ್ ಟೆನಿಸ್‌ ಟೂರ್ನಿಯಲ್ಲಿ ಆಡಲು ಅವಕಾಶ ಸಿಗದೇ ಇದ್ದರೂ ಸರ್ಬಿಯಾದ ನೊವಾಕ್ ಜೊಕೊವಿಚ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನ ಚಾಂಪಿಯನ್‌ ಆ್ಯಶ್ಲಿ ಬಾರ್ಟಿ ಮಹಿಳೆಯರ ವಿಭಾಗದಲ್ಲಿ ಅಗ್ರ ಸ್ಥಾನದಲ್ಲೇ ಮುಂದುವರಿದಿದ್ದಾರೆ.

ಆಸ್ಟ್ರೇಲಿಯನ್ ಓಪ‍ನ್‌ನ ಪುರುಷರ ವಿಭಾಗದ ಪ್ರಶಸ್ತಿ ವಿಜೇತ ರಫೆಲ್ ನಡಾಲ್ ಐದನೇ ಸ್ಥನದಲ್ಲಿ ಮುಂದುವರಿದಿದ್ದು ಅವರ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತ ಇಟಲಿಯ ಮಟಿಯೊ ಬೆರೆಟಿನಿ ಒಂದು ಸ್ಥಾನದ ಏರಿಕೆಯೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ. ಸ್ಪೇನ್‌ನ ಪ್ಯಾಬ್ಲೊ ಕರೆನೊ ಮತ್ತು ಅಮೆರಿಕದ ಟೇಲರ್ ಫ್ರಿಟ್ಜ್‌ ಅಗ್ರ 20ರೊಳಗೆ ಪ್ರವೇಶಿಸಿದ್ದು ಕ್ರಮವಾಗಿ 17 ಮತ್ತು 20ನೇ ಸ್ಥಾನಗಳಲ್ಲಿದ್ದಾರೆ.

ಅಗ್ರ 10ರೊಳಗಿನವರು:

ADVERTISEMENT

ಪುರುಷರು: ನೊವಾಕ್ ಜೊಕೊವಿಚ್ (ಸರ್ಬಿಯಾ)–1, ಡ್ಯಾನಿಲ್ ಮೆಡ್ವೆಡೆವ್(ರಷ್ಯಾ)–2, ಅಲೆಕ್ಸಾಂಡರ್ ಜ್ವೆರೆವ್(ಜರ್ಮನಿ)–3, ಸ್ಟೆಫನೊಸ್ ಸಿಟ್ಸಿಪಾಸ್ (ಗ್ರೀಸ್‌)–4, ರಫೆಲ್ ನಡಾಲ್ (ಸ್ಪೇನ್‌)–5, ಮಟಿಯೊ ಬೆರೆಟಿನಿ(ಇಟಲಿ)–6, ಆ್ಯಂಡ್ರೆ ರುಬ್ಲೆವ್‌(ರಷ್ಯಾ)–7, ಕಾಸ್ಪರ್‌ ರೂಡ್‌ (ನಾರ್ವೆ)–8, ಫೆಲಿಕ್ಸ್ ಆಗರ್ ಅಲಿಯಾಸಿಮ್(ಕೆನಡಾ)–9, ಜನಿಕ್ ಸಿನ್ನರ್(ಇಟಲಿ)–10.

ಮಹಿಳೆಯರ ವಿಭಾಗ: ಆ್ಯಶ್ಲಿ ಬಾರ್ಟಿ (ಆಸ್ಟ್ರೇಲಿಯಾ)–1, ಅರಿನಾ ಸಬಲೆಂಕ (ಬೆಲಾರಸ್‌)–2, ಬಾರ್ಬೊರಾ ಕ್ರೆಜಿಕೋವ (ಜೆಕ್‌ ಗಣರಾಜ್ಯ)–3, ಇಗಾ ಸ್ವಾಟೆಕ್ (ಪೋಲೆಂಡ್‌)–4, ಕರೊಲಿನ ಪ್ಲಿಸ್ಕೋವ (ಜೆಕ್ ಗಣರಾಜ್ಯ)–5, ಪೌಲಾ ಬಡೋಸ (ಸ್ಪೇನ್‌)–6, ಗಾರ್ಬೈನ್ ಮುಗುರುಜಾ (ಸ್ಪೇನ್)–7, ಮರಿಯಾ ಸಕ್ಕಾರಿ (ಗ್ರೀಸ್‌)–8, ಅನೆಟ್ ಕೊಂಟಾವೇಟ್‌ (ಎಸ್ಟೋನಿಯ)–9, ಡ್ಯಾನಿಯಲ್ ಕಾಲಿನ್ಸ್‌ (ಅಮೆರಿಕ)–10.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.