ADVERTISEMENT

Wimbledon | ಸೆಮೀಸ್‌ಗೆ ಲಗ್ಗೆ; ಫೆಡರರ್ ದಾಖಲೆ ಸರಿಗಟ್ಟಿದ ಜೊಕೊವಿಚ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜುಲೈ 2024, 15:32 IST
Last Updated 10 ಜುಲೈ 2024, 15:32 IST
<div class="paragraphs"><p>ನೊವಾಕ್ ಜೊಕೊವಿಚ್</p></div>

ನೊವಾಕ್ ಜೊಕೊವಿಚ್

   

(ರಾಯಿಟರ್ಸ್ ಚಿತ್ರ)

ಲಂಡನ್: ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ADVERTISEMENT

ಆ ಮೂಲಕ 13 ಸಲ ವಿಂಬಲ್ಡನ್ ಸೆಮಿಫೈನಲ್‌ಗೇರಿದ್ದ ದಿಗ್ಗಜ ರೋಜರ್ ಫೆಡರರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಅಲ್ಲದೆ 37 ವರ್ಷದ ಜೊಕೊವಿಚ್, ಎಂಟು ಬಾರಿ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡಿದ್ದ ಫೆಡರರ್ ದಾಖಲೆಯನ್ನು ಸರಿಗಟ್ಟುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ಕ್ವಾರ್ಟರ್ ಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದ ಮಿನೋರ್...

ಗಾಯದ ಸಮಸ್ಯೆಗೆ ಒಳಗಾದ ಒಂಬತ್ತನೇ ಶ್ರೇಯಾಂಕಿತ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೋರ್, ಕ್ವಾರ್ಟರ್ ಫೈನಲ್ ಪಂದ್ಯದಿಂದ ಹಿಂದೆ ಸರಿದರು. ಇದರ ಲಾಭ ಪಡೆದ ಜೊಕೊವಿಚ್, ಒಂದೇ ಒಂದು ಸರ್ವ್ ಕೂಡ ಮಾಡದೇ ಅಂತಿಮ ನಾಲ್ಕರ ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ.

ಎರಡನೇ ಶ್ರೇಯಾಂಕಿತ ಫೆಡರರ್ ಸೆಮಿಫೈನಲ್‌ನಲ್ಲಿ ಲೊರೆಂಝೊ ಮುಸೆಟ್ಟಿ ಹಾಗೂ ಟೇಲರ್ ಫ್ರಿಟ್ಜ್ ನಡುವಣ ಪಂದ್ಯ ವಿಜೇತರನ್ನು ಎದುರಿಸಲಿದ್ದಾರೆ.

ಒಟ್ಟಾರೆಯಾಗಿ ಜೊಕೊವಿಚ್ ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದಾರೆ.

ಮಗದೊಂದು ಸೆಮಿಫೈನಲ್ ಪಂದ್ಯದಲ್ಲಿ ಕಾರ್ಲೊಸ್ ಅಲ್ಕರಾಜ್ ಅವರು ಡೇನಿಯಲ್ ಮೆಡ್ವೆಡೆವ್ ಸವಾಲನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.