ದುಬೈ: ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಮತ್ತು ರುಮೇನಿಯಾದ ಸಿಮೊನಾ ಹಲೆಪ್ ಅವರು ದುಬೈ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕಿತ ಆಟಗಾರ್ತಿ ಕ್ವಿಟೋವಾ 7–5, 1–6, 6–3ರಲ್ಲಿ ಅಮೆರಿಕದ ಜೆನಿಫರ್ ಬ್ರಾಡಿ ಅವರನ್ನು ಮಣಿಸಿದರು.
ಇನ್ನೊಂದು ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಆಟಗಾರ್ತಿ ಹಲೆಪ್ 6–3, 7–5 ನೇರ ಸೆಟ್‌ಗಳಿಂದ ಉಕ್ರೇನ್‌ನ ಲೇಸಿಯಾ ಸುರೆಂಕೊ ಎದುರು ಗೆದ್ದರು.
ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಹಲೆಪ್, ಈ ಪಂದ್ಯದಲ್ಲಿ ಏಳು ಬಾರಿ ಎದುರಾಳಿಯ ಸರ್ವ್ ಮುರಿದು ಅಭಿಮಾನಿಗಳನ್ನು ರಂಜಿಸಿದರು.
ಜರ್ಮನಿಯ ಏಂಜಲಿಕ್ ಕೆರ್ಬರ್ 7–5, 4–6, 0–6ರಲ್ಲಿ ತೈವಾನ್‌ನ ಹ್ಸಿ ಸು ವೀ ಎದುರು ಆಘಾತ ಕಂಡರು.
ಇತರ ಪಂದ್ಯಗಳಲ್ಲಿ ಕಾರ್ಲಾ ಸ್ವಾರೆಜ್ ನವಾರೊ 7–5, 7–5ರಲ್ಲಿ ಕ್ರಿಸ್ಟಿನಾ ಮ್ಲಾಡೆನೊವಿಚ್ ಎದುರೂ, ವಿಕ್ಟೋರಿಯಾ ಕುಜಮೋವಾ 1–6, 7–5, 6–2ರಲ್ಲಿ ಸೋಫಿಯಾ ಕೆನಿನ್ ಮೇಲೂ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.