PHOTOS | ಅಮೆರಿಕ ಓಪನ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಟ್ಟ 18ರ ಹರೆಯದ ಎಮ್ಮಾ ರಾಡುಕಾನು
ಪ್ರತಿಷ್ಠಿತ ಅಮೆರಿಕ ಓಪನ್ ಮಹಿಳೆಯರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಬ್ರಿಟನ್‌ನ 18 ವರ್ಷದ ಯುವ ತಾರೆ ಎಮ್ಮಾ ರಾಡುಕಾನು ನೂತನ ಇತಿಹಾಸ ರಚಿಸಿದ್ದಾರೆ. ಈ ಮೂಲಕ ಟೆನಿಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ವಾಲಿಫೈಯರ್ ಆಟಗಾರ್ತಿ, ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಮುಖಾಮುಖಿಯಲ್ಲಿ ಎಮ್ಮಾ ರಡುಕಾನು ಅವರು ಎದುರಾಳಿ ಕೆನಡಾದ ಲೇಲಾ ಫರ್ನಾಂಡೆಜ್ ವಿರುದ್ಧ 6-4, 6-3ರ ಅಂತರದಲ್ಲಿ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟರು.
ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 5:09 IST
Last Updated 12 ಸೆಪ್ಟೆಂಬರ್ 2021, 5:09 IST
ಅಮೆರಿಕನ್ ಓಪನ್ ಪ್ರಶಸ್ತಿಗೆ ಮುತ್ತಿಟ್ಟ ಬ್ರಿಟನ್‌ನ ಯುವ ತಾರೆ ಎಮ್ಮಾ ರಾಡುಕಾನು
ರನ್ನರ್ ಅಪ್ ಲೇಲಾ ಫರ್ನಾಂಡೆಜ್ ಜೊತೆಗೆ ಎಮ್ಮಾ ರಾಡುಕಾನು
ಒಂದೇ ಒಂದು ಸೆಟ್ ಸೋಲದೇ ಅಮೆರಿಕ ಓಪನ್ ಗೆದ್ದ ಸಾಧನೆ
ಕ್ವಾಲಿಫೈಯರ್, 150ನೇ ರ‍್ಯಾಂಕ್ ಆಟಗಾರ್ತಿಯಿಂದ ಅವಿಸ್ಮರಣೀಯ ಸಾಧನೆ
ಪ್ರಶಸ್ತಿಗೆ ಮುತ್ತಿಟ್ಟ ಎಮ್ಮಾ ರಾಡುಕಾನು
1968ರ ಬಳಿಕ ಅಮೆರಿಕನ್ ಓಪನ್ ಗೆದ್ದ ಬ್ರಿಟನ್ ಆಟಗಾರ್ತಿ
1977ರಲ್ಲಿ ವರ್ಜೀನಿಯಾ ವೇಡ್ ವಿಂಬಲ್ಡನ್ ಗೆದ್ದ ಬಳಿಕ ಸಿಂಗಲ್ಸ್ ಕಿರೀಟ ಗೆದ್ದ ಬ್ರಿಟನ್ ಆಟಗಾರ್ತಿ
ಶ್ರೇಯಾಂಕ ರಹಿತ ಆಟಗಾರ್ತಿಯರು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು.
ಗಾಯವನ್ನು ಲೆಕ್ಕಿಸದ ಛಲಗಾರ್ತಿ
ರನ್ನರ್ ಅಪ್ ಪ್ರಶಸ್ತಿ ಗೆದ್ದ 19ರ ವರ್ಷದ ಕೆನಡಾದ ಲೇಲಾ ಫರ್ನಾಂಡೆಜ್