ADVERTISEMENT

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಫೈನಲ್‌ಗೆ ಕಾರ್ಲೋಸ್ ಅಲ್ಕರಾಜ್

ಏಜೆನ್ಸೀಸ್
Published 7 ಜೂನ್ 2024, 23:34 IST
Last Updated 7 ಜೂನ್ 2024, 23:34 IST
<div class="paragraphs"><p>ಕಾರ್ಲೋಸ್ ಅಲ್ಕರಾಜ್  </p></div>

ಕಾರ್ಲೋಸ್ ಅಲ್ಕರಾಜ್

   

ಪ್ಯಾರಿಸ್: ಮೂರನೇ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್ ಅವರು ಶುಕ್ರವಾರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಶ್ರೇಯಾಂಕದ ಯಾನಿಕ್ ಸಿನ್ನರ್ ಅವರನ್ನು ಮಣಿಸಿ ಫೈನಲ್‌ಗೆ ಲಗ್ಗೆ ಹಾಕಿದರು.

ಮಾಜಿ ಅಗ್ರಮಾನ್ಯ ಆಟಗಾರನಾಗಿರುವ 21 ವರ್ಷದ  ಅಲ್ಕರಾಜ್‌ ಎರಡು  ಗ್ರ್ಯಾನ್‌ಸ್ಲ್ಯಾಮ್ ಟೂರ್ನಿ ಜಯಿಸಿದ್ದಾರೆ. ‌

ADVERTISEMENT

ಭಾನುವಾರ ನಡೆಯುವ ಫೈನಲ್‌ನಲ್ಲಿ ಅಲೆಕ್ಸಾಂಡರ್‌ ಜ್ವರೇವ್  ಅಥವಾ  ನಾರ್ವೆಯ  ಕ್ಯಾಸ್ಪರ್‌ ರುಡ್‌ ಅವರನ್ನು ಎದುರಿಸುವರು. 

ಅಲ್ಕರಾಜ್ ಅವರು 2–6, 6–3, 3–6, 6–4, 6–3 ಸೆಟ್‌ಗಳಿಂದ ಇಟಲಿಯ ಸಿನ್ನರ್‌ ವಿರುದ್ಧ ಗೆಲುವು ಸಾಧಿಸಿದರು. ಮೊದಲ ಸೆಟ್ ಅನ್ನು ಸಿನ್ನರ್ ಸುಲಭವಾಗಿ ಗೆದ್ದರು. ಅಲ್ಕರಾಜ್ ಎರಡನೇ ಸೆಟ್‌ ಗೆದ್ದರು. ನಂತರ  ಹಿಡಿತ ಸಾಧಿಸಿ ಮುನ್ನಡೆದರು. 

ಮಂಗಳವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ  ಅಲ್ಕರಾಜ್‌  6–3, 7–6 (7/3), 6–4 ರಲ್ಲಿ ನೇರ ಸೆಟ್‌ಗಳಿಂದ ಗ್ರೀಸ್‌ನ ಸ್ಟೆಫಾನೊಸ್‌ ಸಿಸಿಪಾಸ್ ಅವರನ್ನು ಸೋಲಿಸಿದ್ದರು.  

‘ಯಾನಿಕ್ ಜಾನಿಕ್ ವಿರುದ್ಧ ಈ ರೀತಿಯ ಇನ್ನೂ ಅನೇಕ ಪಂದ್ಯಗಳನ್ನು ಆಡಲು ನಾನು ಆಶಿಸುತ್ತೇನೆ. ಆದರೆ ಇದು ನಾನು ಖಂಡಿತವಾಗಿಯೂ ಆಡಿದ ಕಠಿಣ ಪಂದ್ಯಗಳಲ್ಲಿ ಒಂದಾಗಿದೆ. ನನ್ನ ಆಟದ ಬಗ್ಗೆ  ಸಂತೋಷವಾಗಿದೆ. ಈ ಕ್ಷಣಕ್ಕಾಗಿ ಕಾಯುತ್ತಿದ್ದೆ’ ಎಂದು ಪಂದ್ಯದ ಬಳಿಕ ಅಲ್ಕರಾಜ್ ಅವರು ಹೇಳಿದರು. 

ಶನಿವಾರ ನಡೆಯುವ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್ ಅವರು 12ನೇ ಶ್ರೇಯಾಂಕದ ಇಟಲಿಯ ಜಾಸ್ಮಿನ್‌ ಪಾವ್ಲೋನಿ ಅವರನ್ನು ಎದುರಿಸುವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.