ADVERTISEMENT

ಟೆನಿಸ್‌: ಹರ್ಷಿಣಿ, ಕ್ಷಿತಿಜ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 13:02 IST
Last Updated 9 ಡಿಸೆಂಬರ್ 2022, 13:02 IST
ಪ್ರಶಸ್ತಿಯೊಂದಿಗೆ ಆರಾಧ್ಯ ಕ್ಷಿತಿಜ್ ಮತ್ತು ಹರ್ಷಿಣಿ ನಾಗರಾಜ್‌
ಪ್ರಶಸ್ತಿಯೊಂದಿಗೆ ಆರಾಧ್ಯ ಕ್ಷಿತಿಜ್ ಮತ್ತು ಹರ್ಷಿಣಿ ನಾಗರಾಜ್‌   

ಬೆಂಗಳೂರು: ಹರ್ಷಿಣಿ ನಾಗರಾಜ್ ಮತ್ತು ಆರಾಧ್ಯ ಕ್ಷಿತಿಜ್ ಅವರು ಏಷ್ಯನ್ ಜೂನಿಯರ್ ಟೂರ್ 16 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕಿ ಮತ್ತು ಬಾಲಕರ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದರು.

ಇಲ್ಲಿಯ ಟಾಪ್‌ಸ್ಪಿನ್‌ ಅಕಾಡೆಮಿಯಲ್ಲಿ ನಡೆದ ಟೂರ್ನಿಯ ಬಾಲಕಿಯರ ಸಿಂಗಲ್ಸ್ ಫೈನಲ್‌ನಲ್ಲಿ ಶುಕ್ರವಾರ ಹರ್ಷಣಿ6-2, 6-4ರಿಂದ ಜಯಾ ಕಪೂರ್ ವಿರುದ್ಧ ಜಯಿಸಿದರು. ಬಾಲಕರ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ಆರಾಧ್ಯ6-2, 6-4ರಿಂದ ಪಿ. ಲೋಗನಾಥನ್ ಅವರನ್ನು ಸೋಲಿಸಿದರು.

ಬಾಲಕರ ಡಬಲ್ಸ್‌ನಲ್ಲಿ ಶ್ರೀಕರ್ ದೋನಿ ಮತ್ತು ಪಿ. ಶ್ರವಣಕುಮಾರ್6-2, 6-4ರಿಂದ ಅರ್ಜುನ್ ಪ್ರೇಮ್‌ಕುಮಾರ್ ಮತ್ತು ಡಿ. ವೆಂಕಟರಾಮನ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು. ಬಾಲಕಿಯರ ಡಬಲ್ಸ್‌ ಫೈನಲ್‌ನಲ್ಲಿ ಮೇಘನಾ ಜಿ.ಡಿ. ಮತ್ತು ಹರಿತಾಶ್ರೀ ವೆಂಕಟೇಶ್6-7 (3), 6-1, 10-6ರಿಂದ ಸೆಜಲ್ ಭುತಾದ–ಜಯಾ ಕಪೂರ್ ಎದುರು ಗೆದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.