ಮೈಸೂರು: ಅಪೂರ್ವ ವೇಮುರಿ, ಮಂಡ್ಯದ ಕಾಶ್ವಿ ಸುನಿಲ್ ಸೇರಿ ಏಳು ಭಾರತೀಯ ಆಟಗಾರ್ತಿಯರು ಇಲ್ಲಿ ನಡೆಯುತ್ತಿರುವ ಐಟಿಎಫ್– ಮಹಿಳೆಯರ ವಿಶ್ವ ಟೆನಿಸ್ ಟೂರ್ ಟೂರ್ನಿಯ ಮುಖ್ಯಸುತ್ತಿಗೆ ಸೋಮವಾರ ಪ್ರವೇಶ ಪಡೆದರು.
ಚಾಮರಾಜಪುರಂನ ಮೈಸೂರು ಟೆನಿಸ್ ಕ್ಲಬ್ (ಎಂಟಿಸಿ)ನಲ್ಲಿ ನಡೆದ ಪಂದ್ಯದಲ್ಲಿ ಅಪೂರ್ವ ವೇಮುರಿ 5–3ರಿಂದ ಚೆವಿಕಾ ರೆಡ್ಡಿ ಸಮಾ ವಿರುದ್ಧ ಮೊದಲ ಸೆಟ್ ಗೆದ್ದರು. ಈ ವೇಳೆ ಗಾಯಗೊಂಡು ಚೆವಿಕಾ ನಿವೃತ್ತರಾದರು.
ಮಂಡ್ಯದ ಕಾಶ್ವಿ ಸುನಿಲ್ ಟೂರ್ನಿಯ ಅಗ್ರಶೇಯಾಂಕಿತೆ ಪ್ರಿಯಾಂಶಿ ಭಂಡಾರಿ ಅವರನ್ನು ಅರ್ಹತಾ ಸುತ್ತಿನ ಫೈನಲ್‌ನಲ್ಲಿ ಎದುರಾದರು. 5-7, 0-3ರಿಂದ ಮುನ್ನಡೆ ಸಾಧಿಸಿದ್ದ ಪ್ರಿಯಾಂಶಿ, ಭುಜದ ನೋವಿನಿಂದ ನಿವೃತ್ತರಾದರು. ಅದರಿಂದ ಕಾಶ್ವಿ ಹಿನ್ನಡೆ ಅನುಭವಿಸಿದ್ದರೂ ಮುಖ್ಯ ಸುತ್ತಿಗೆ ಪ್ರವೇಶ ಪಡೆಯುವ ಅವಕಾಶ ಸಿಕ್ಕಿತು.
ಮೂರನೇ ಶ್ರೇಯಾಂಕಿತೆ ಅಭಯಾ ವೇಮುರಿ ಅವರು ಈಶ್ವರಿ ಮಾತೆರೆ ವಿರುದ್ಧ 6–1, 6–2ರಿಂದ ಗೆದ್ದರೆ, ಲಕ್ಷ್ಮಿಪ್ರಭಾ ಅರುಣ್ ಕುಮಾರ್ 6–2, 6–3ರಿಂದ ಹಾಕ್‌ಕಾಂಗ್‌ನ ನಿಯೊಮಿ ಹಾಗಿ ಅವರನ್ನು ಮಣಿಸಿದರು.
ಫಲಿತಾಂಶ: ಅರ್ಹತಾ ಸುತ್ತು: ಜಪಾನ್‌ನ ಖೈಲಿ ಡೆಮಿತ್ಸೊ 6–0, 6–2ರಿಂದ ಶ್ರೀನಿಧಿ ಬಾಲಾಜಿ ಎದುರು, ಕಾಶಿಶ್ ಭಾಟಿಯಾ 7–5, 6–0ರಿಂದ ಫ್ರಾನ್ಸ್‌ನ ನಿಯೊಮಿ ದಾದೌನ್ ಎದುರು, ಸೆಜಲ್ ಗೋಪಾಲ್ ಬೂತಾಡ 6–4. 6–3ರಿಂದ ಜಪಾನ್‌ನ ನೋಲಾನಿ ಸಾರಾತ್ಸೋ ಎದುರು, ಅದಿತಿ ರಾವತ್ 4–6, 6-2, 12-10ರಿಂದ ಜನನಿ ರಮೇಶ್ ಎದುರು ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.