ADVERTISEMENT

ITF | ಮಹಿಳೆಯರ ವಿಶ್ವ ಟೆನಿಸ್‌ ಟೂರ್ನಿ: ಎಂಟರ ಘಟ್ಟಕ್ಕೆ ಸ್ಮೃತಿ, ಶ್ರೀವಲ್ಲಿ

ಆರ್.ಜಿತೇಂದ್ರ
Published 10 ಅಕ್ಟೋಬರ್ 2024, 23:00 IST
Last Updated 10 ಅಕ್ಟೋಬರ್ 2024, 23:00 IST
<div class="paragraphs"><p>ಮೈಸೂರು ಓಪನ್‌ ಐಟಿಎಫ್‌ ಟೂರ್ನಿಯಲ್ಲಿ ಗುರುವಾರ ಅಚ್ಚರಿಯ ಗೆಲುವು ದಾಖಲಿಸಿದ ಪೂಜಾ ಇಂಗಳೆ ಹೊಡೆತದ ಭಂಗಿ</p></div>

ಮೈಸೂರು ಓಪನ್‌ ಐಟಿಎಫ್‌ ಟೂರ್ನಿಯಲ್ಲಿ ಗುರುವಾರ ಅಚ್ಚರಿಯ ಗೆಲುವು ದಾಖಲಿಸಿದ ಪೂಜಾ ಇಂಗಳೆ ಹೊಡೆತದ ಭಂಗಿ

   

– ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ಟೂರ್ನಿಯ ಅಗ್ರ ಶ್ರೇಯಾಂಕಿತೆ ಶ್ರೀವಲ್ಲಿ ರಶ್ಮಿಕಾ ಭಮಿಡಿಪಾಟಿ ಹಾಗೂ ಸ್ಮೃತಿ ಭಾಸಿನ್ ಇಲ್ಲಿ ನಡೆದಿರುವ ‘ಐಟಿಎಫ್‌ ಮೈಸೂರು ಓಪನ್‌’ ಮಹಿಳೆಯರ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು.

ADVERTISEMENT

ಚಾಮರಾಜಪುರಂನ ಮೈಸೂರು ಟೆನಿಸ್‌ ಕ್ಲಬ್‌ (ಎಂಟಿಸಿ) ಅಂಗಳದಲ್ಲಿ ಗುರುವಾರ ನಡೆದ ಎರಡನೇ ಸುತ್ತಿನ ರೋಚಕ ಹಣಾಹಣಿಯಲ್ಲಿ ಹೈದರಬಾದ್‌ನ 21 ವರ್ಷದ ತರುಣಿ ಸ್ಮೃತಿ ಬೆಂಗಳೂರಿನ ಹರ್ಷಿಣಿ ನಾಗರಾಜ್‌ ವಿರುದ್ಧ 3-6, 6-4, 7-6 (9-7) ರಿಂದ ಗೆದ್ದು ಬೀಗಿದರು.

ಮೊದಲ ಸೆಟ್‌ ಅನ್ನು ಎದುರಾಳಿಗೆ ಬಿಟ್ಟು ಕೊಟ್ಟ ಸ್ಮೃತಿ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಹರಿಣಿ 5–4ರಿಂದ ಮುಂದಿದ್ದು ಪಂದ್ಯ ಗೆಲ್ಲುವ ಉತ್ಸಾಹ ತೋರಿದರು. ಆದರೆ ಬಲಿಷ್ಠ ಹಿಂಗೈ ಹೊಡೆತಗಳ ಮೂಲಕ ಲಯ ಕಂಡುಕೊಂಡ ಸ್ಮೃತಿ ಪಂದ್ಯವನ್ನು ಟೈಬ್ರೇಕ್‌ಗೆ (6–6) ಕೊಂಡೊಯ್ದರು. ಅಂತಿಮವಾಗಿ ಸೆಟ್ ಗೆದ್ದು ಪಂದ್ಯ ತಮ್ಮದಾಗಿಸಿಕೊಂಡರು.

ಪ್ರಶಸ್ತಿಯ ಕನಸಿನಲ್ಲಿರುವ ಶ್ರೀವಲ್ಲಿ 6–1, 6–3ರಲ್ಲಿ ತನಿಷಾ ಕಶ್ಯಪ್‌ ವಿರುದ್ಧ ಸುಲಭ ಗೆಲುವು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಪೂಜಾ ಇಂಗಳೆ 5–7, 6–3, 7–6 ( 8–6) ರಿಂದ 8ನೇ ಶ್ರೇಯಾಂಕಿತೆ ಹುಮೇರಾ ಬಹರ್ಮಸ್‌ಗೆ ಆಘಾತ ನೀಡಿದರು.

ಉಪಾಂತ್ಯಕ್ಕೆ ಕರ್ನಾಟಕದ ಸೋಹಾ: ಕರ್ನಾಟಕದ ಸೋಹಾ ಸಿದಿಕ್‌, ಆಕಾಂಕ್ಷಾ ನಿಟ್ಟೂರೆ ಜೊತೆಗೂಡಿ ಡಬಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದು, ರಷ್ಯಾದ ಪೊಲೀನಾ ಕೈಬೆಕೊವಾ ಹಾಗೂ ರಲಿನಾ ಕಲಿಮುಲ್ಲಿನಾರನ್ನು ಎದುರಿಸಲಿದೆ. ಗುರುವಾರ ನಡೆದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಈ ಜೋಡಿಯು 6–0, 6–1ರಿಂದ ಅಭಿಲಾಷ ಬಿಸ್ತಾ ಹಾಗೂ ಪಾವನಿ ಪಾಠಕ್ ಜೋಡಿಯನ್ನು ಸುಲಭವಾಗಿ ಮಣಿಸಿತು.

ಫಲಿತಾಂಶ:
ಸಿಂಗಲ್ಸ್‌:
( ಎರಡನೇ ಸುತ್ತು): ಆಕಾಂಕ್ಷಾ ನಿಟ್ಟೂರೆ 6–2, 6–4ರಿಂದ ಅಮೆರಿಕಾದ ಶ್ರಿಯಾ ಅತ್ತೂರು ವಿರುದ್ಧ; ರಿಯಾ ಭಾಟಿಯಾ 6–3, 6–3ರಿಂದ ಜಪಾನ್‌ನ ಕೈಲಿ ಡೆಮಿಸ್ಸೊ ಎದುರು; ಡೆನ್ಮಾರ್ಕ್‌ನ ಎಲೆನಾ ಜಂಶಿದಿ 6–4, 6–2ರಿಂದ ರಷ್ಯಾದ ಪೊಲಿನಾ ಕೈಬೆಕೊವಾ ಎದುರು; ಅಮೆರಿಕಾದ ಜೆಸ್ಸಿ ಅನೆ 6–0, 6–1ರಿಂದ ಸಹಿರಾ ಸಿಂಗ್‌ ವಿರುದ್ಧ; ಲಕ್ಷ್ಮಿಪ್ರಭಾ ಅರುಣ್‌ಕುಮಾರ್‌ 6–3, 6–3ರಿಂದ ಯಶಸ್ವಿನಿ ಪನ್ವರ್ ವಿರುದ್ಧ ಗೆಲುವು.

ಡಬಲ್ಸ್‌ ( ಕ್ವಾರ್ಟರ್‌ಫೈನಲ್ಸ್‌): ಜೆಸ್ಸಿ ಅನೆ ( ಅಮೆರಿಕಾ)– ರಿಯಾ ಭಾಟಿಯಾ 6–2, 6–3ರಿಂದ ಸ್ಮೃತಿ ಭಾಸಿನ್‌– ಎಲೆನಾ ಜಂಶಿದಿ ವಿರುದ್ಧ; ದಿವಾ ಭಾಟಿಯಾ– ಸಾಯಿ ಸಂಹಿತಾ 7-6 (7-5), 3-6, 10-6 ರಿಂದ ಶ್ರಾವ್ಯ ಶಿವಾನಿ– ಕ್ಯಾರೊಲನ್‌ ಡೆಲೌನಯ್‌ ಎದುರು; ಪೊಲಿನಾ ಕೈಬೆಕೊವಾ–ರಲಿನಾ ಕಲಿಮಲ್ಲಿನಾ 5-7, 6-3, 10-7ರಿಂದ ಹುಮೇರಾ– ಪೂಜಾ ಇಂಗಳೆ ವಿರುದ್ಧ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.