ADVERTISEMENT

ಸಾಫ್ಟ್ ಟೆನಿಸ್ ವಿಶ್ವ ಚಾಂಪಿಯನ್‌ಷಿಪ್: ಭಾರತ ಚಾರಿತ್ರಿಕ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಸೆಪ್ಟೆಂಬರ್ 2024, 16:02 IST
Last Updated 6 ಸೆಪ್ಟೆಂಬರ್ 2024, 16:02 IST
<div class="paragraphs"><p>ಜಯ್ ಮೀನಾ, ಆದ್ಯಾ ತಿವಾರಿ</p></div>

ಜಯ್ ಮೀನಾ, ಆದ್ಯಾ ತಿವಾರಿ

   

(ಚಿತ್ರ ಕೃಪೆ: X/@Media_SAI)

ನವದೆಹಲಿ: ದಕ್ಷಿಣ ಕೊರಿಯಾದಲ್ಲಿ ನಡೆದ ಸಾಫ್ಟ್ ಟೆನಿಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಚಾರಿತ್ರಿಕ ಸಾಧನೆ ಮಾಡಿದೆ.

ADVERTISEMENT

ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಜಯ್ ಮೀನಾ ಮತ್ತು ಆದ್ಯಾ ತಿವಾರಿ ಜೋಡಿ ಕಂಚಿನ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಸಾಫ್ಟ್ ಟೆನಿಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಗೆದ್ದಿರುವ ಮೊದಲ ಪದಕ ಇದಾಗಿದೆ.

17ನೇ ಸಾಫ್ಟ್ ಟೆನಿಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಕ್ರೀಡಾಪುಟುಗಳ ಸಾಧನೆಯನ್ನು ಕ್ರೀಡಾ ಸಚಿವ ಮನಸುಖ್ ಮಾಂಡವೀಯ ಅವರು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.