ADVERTISEMENT

ಟೆನಿಸ್‌: ಕೆವಿನ್‌, ಕರಣ್‌ ಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 0:18 IST
Last Updated 8 ಜೂನ್ 2024, 0:18 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಮೂರನೇ ಶ್ರೇಯಾಂಕದ ಕರ್ನಾಟಕದ ಕೆವಿನ್‌ ಸುರೇಶ್‌ ಅವರು ಇಲ್ಲಿನ ಟಾಪ್‌ಸ್ಪಿನ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಟಿ.ಎನ್‌.ಆರ್. ಸ್ಮಾರಕ ಎಐಟಿಎ ರಾಷ್ಟ್ರೀಯ ಸರಣಿಯ 18 ವರ್ಷದೊಳಗಿನವರ ಟೆನಿಸ್‌ ಟೂರ್ನಿಯ ಬಾಲಕರ ಸಿಂಗಲ್ಸ್‌ನಲ್ಲಿ 7-6(3), 6-4 ಸೆಟ್‌ಗಳಿಂದ ಎರಡನೇ ಶ್ರೇಯಾಂಕದ ಡೇವಿಡ್‌ ಜೇಸನ್ (ಕರ್ನಾಟಕ) ಅವರನ್ನು ಮಣಿಸಿ ಫೈನಲ್‌ ಪ್ರವೇಶಿಸಿದರು.

ಶುಕ್ರವಾರ ನಡೆದ ಮತ್ತೊಂದು ಸೆಮಿಫೈನಲ್‌ನಲ್ಲಿ ಕೇರಳದ ಕರಣ್‌ ಥಾಪಾ 7-5, 6-3 ರಿಂದ ಕರ್ನಾಟಕದ ಶ್ರೀಕರ್‌ ಡೋಣಿ ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದರು.

ADVERTISEMENT

ಬಾಲಕಿಯರ ಸಿಂಗಲ್ಸ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಕರ್ನಾಟಕದ ಅಮೋದಿನಿ ನಾಯಕ್‌ 7-5,6-4ರಿಂದ ಅಗ್ರ ಶ್ರೇಯಾಂಕದ ಹರ್ಷಿಣಿ ಎನ್‌. (ಕರ್ನಾಟಕ) ಅವರಿಗೆ ಆಘಾತ ನೀಡಿ ಫೈನಲ್‌ಗೆ ಲಗ್ಗೆ ಹಾಕಿದರು. ಮತ್ತೊಂದು ಸೆಮಿಫೈನಲ್‌ನಲ್ಲಿ ಕರ್ನಾಟಕದ ಸ್ನಿಗ್ಧಾ ಕಾಂತ 7-6(8), 6-0ರಿಂದ ಕಶ್ವಿ ಸುನಿಲ್‌ (ಕರ್ನಾಟಕ) ಅವರನ್ನು ಮಣಿಸಿ ಮುನ್ನಡೆದರು.

ಬಾಲಕರ ಡಬಲ್ಸ್‌ನಲ್ಲಿ ಶ್ರೀಕರ್‌ ಡೋಣಿ ಮತ್ತು ಕೆವಿನ್‌ ಸುರೇಶ್‌ ಜೋಡಿ ಪ್ರಶಸ್ತಿಯನ್ನು ಗೆದ್ದುಕೊಂಡರೆ, ಬಾಲಕಿಯರ ಡಬಲ್ಸ್‌ನಲ್ಲಿ ಮಹಾರಾಷ್ಟ್ರದ ನೈನಿಕಾ ಬೇಂದ್ರಂ ಮತ್ತು ಕೇರಳದ ಹರ್ಷಿಣಿ ಎಚ್‌. ಜೋಡಿ ಚಾಂಪಿಯನ್‌ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.