ಪ್ಯಾರಿಸ್: ಐದು ಸೆಟ್‌ಗಳ ಹಣಾಹಣಿಯಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್‌ಗೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪ್ರಶಸ್ತಿ ಸುತ್ತಿನಲ್ಲಿ ಮಣಿದರೂ ಗ್ರೀಸ್‌ನ ಯುವ ಆಟಗಾರ ಸ್ಟೆಫನೊಸ್ ಸಿಟ್ಸಿಪಾಸ್ ಸೋಮವಾರ ಬಿಡುಗಡೆಗೊಂಡ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನದ ಬಡ್ತಿ ಕಂಡಿದ್ದಾರೆ.
ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಸಿಟ್ಸಿಪಾಸ್ ಅವರನ್ನು ಮಣಿಸಿ 19ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದ ಜೊಕೊವಿಚ್ ರ‍್ಯಾಂಕಿಂಗ್‌ನಲ್ಲಿ ಒಂದನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಎಲ್ಲ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಎರಡು ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ದಾಖಲೆಯೂ ಜೊಕೊವಿಚ್ ಹೆಸರಿಗೆ ಸೇರಿದೆ.
ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್ ಮತ್ತು ಫ್ರೆಂಚ್ ಓಪನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಜೊಕೊವಿಚ್‌ಗೆ ಮಣಿದ ಸ್ಪೇನ್‌ನ ರಫೆಲ್ ನಡಾಲ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿದ್ದ ಸ್ಟೆಫನೊಸ್ ಸಿಟ್ಸಿಪಾಸ್ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.
18 ಸ್ಥಾನ ಏರಿಕೆ ಕಂಡ ಕ್ರೆಚಿಕೊವಾ
ಫ್ರೆಂಚ್ ಓಪನ್ ಟೂರ್ನಿಯ ಮಹಿಳಾ ವಿಭಾಗದ ಚಾಂಪಿಯನ್ ಪಟ್ಟ ಅಲಂಕರಿಸಿದ ಜೆಕ್ ಗಣರಾಜ್ಯದ ಬರ್ಬೊರಾ ಕ್ರೆಚಿಕೊವಾ 18 ಸ್ಥಾನಗಳ ಬಡ್ತಿಯೊಂದಿಗೆ 15ನೇ ಸ್ಥಾನಕ್ಕೆ ಏರಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ಬರ್ಬೊರಾ ರಷ್ಯಾದ ಅನಸ್ತೆಸಿಯಾ ಪೌಲಿಚೆಂಕೋವ ಎದುರು ಗೆಲುವು ಸಾಧಿಸಿದ್ದರು. ಡಬಲ್ಸ್‌ನಲ್ಲೂ ಅವರು ಪ್ರಶಸ್ತಿ ಗೆದ್ದಿದ್ದರು.
ಪೌಲಿಚೆಂಕೋವ 13 ಸ್ಥಾನಗಳ ಬಡ್ತಿ ಗಳಿಸಿದ್ದು 19ನೇ ಸ್ಥಾನಕ್ಕೆ ಲಗ್ಗೆ ಇರಿಸಿದ್ದಾರೆ. ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಪುರುಷರ ವಿಭಾಗದ ಅಗ್ರ 10 ಆಟಗಾರರು
ಆಟಗಾರ;ದೇಶ;ಸ್ಥಾನ
ನೊವಾಕ್ ಜೊಕೊವಿಚ್;ಸರ್ಬಿಯಾ;1
ಡ್ಯಾನಿಯಲ್ ಮೆಡ್ವೆಡೆವ್;ರಷ್ಯಾ;2
ರಫೆಲ್ ನಡಾಲ್;ಸ್ಪೇನ್;3
ಸ್ಟೆಫನೊಸ್ ಸಿಟ್ಸಿಪಾಸ್;ಗ್ರೀಸ್;4
ಡೊಮಿನಿಕ್ ಥೀಮ್;ಆಸ್ಟ್ರಿಯಾ;5
ಅಲೆಕ್ಸಾಂಡರ್ ಜ್ವೆರೆವ್;ಜರ್ಮನಿ;6
ಆ್ಯಂಡ್ರೆ ರುಬ್ಲೆವ್;ರಷ್ಯಾ;7
ರೋಜರ್ ಫೆಡರರ್;ಸ್ವಿಟ್ಜರ್ಲೆಂಡ್;8
ಮಟಿಯೊ ಬೆರೆಟಿನಿ;ಇಟಲಿ;9
ರಾಬರ್ಟೊ ಬೌಟಿಸ್ಟ;ಸ್ಪೇನ್;10
ಮಹಿಳಾ ವಿಭಾಗ
ಆ್ಯಶ್ಲಿ ಬಾರ್ಟಿ;ಆಸ್ಟ್ರೇಲಿಯಾ;1
ನವೊಮಿ ಒಸಾಕ;ಜಪಾನ್;2
ಸಿಮೋನ ಹಲೆಪ್;ರೊಮೇನಿಯ;3
ಅರಿನಾ ಸಬಲೆಂಕಾ;ಬೆಲಾರಸ್;4
ಸೋಫಿಯಾ ಕೆನಿನಸ್;ಅಮೆರಿಕ;5
ಎಲಿನಾ ಸ್ವಿಟೋಲಿನ;ಉಕ್ರೇನ್;6
ಬಿಯಾಂಕ ಆ್ಯಂಡ್ರೀಸ್ಕು;ಕೆನಡಾ;7
ಸೆರೆನಾ ವಿಲಿಯಮ್ಸ್;ಅಮೆರಿಕ;8
ಇಗಾ ಸ್ವಾಟೆಕ್;ಪೋಲೆಂಡ್;9
ಕರೊಲಿನಾ ಪ್ಲಿಸ್ಕೋವ;ಜೆಕ್ ಗಣರಾಜ್ಯ;10
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.