ADVERTISEMENT

ಮಕಾವು ಓಪನ್ | ಸೆಮಿಫೈನಲ್‌ನಲ್ಲಿ ಸೋಲು: ಟ್ರೀಸಾ–ಗಾಯತ್ರಿ ಸವಾಲು ಅಂತ್ಯ

ಪಿಟಿಐ
Published 28 ಸೆಪ್ಟೆಂಬರ್ 2024, 13:40 IST
Last Updated 28 ಸೆಪ್ಟೆಂಬರ್ 2024, 13:40 IST
<div class="paragraphs"><p>ಟ್ರೀಸಾ ಜೋಳಿ–ಗಾಯತ್ರಿ ಗೋಪಿಚಂದ್‌ (ಸಾಂದರ್ಭಿಕ ಚಿತ್ರ)</p></div>

ಟ್ರೀಸಾ ಜೋಳಿ–ಗಾಯತ್ರಿ ಗೋಪಿಚಂದ್‌ (ಸಾಂದರ್ಭಿಕ ಚಿತ್ರ)

   

ಮಕಾವು: ಭಾರತದ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ, ಮಕಾವು ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಚೀನಾ ತೈಪಿಯ ಜೋಡಿಯೆದುರು ಶನಿವಾರ ಸೋಲನುಭವಿಸಿತು. ಇದರೊಡನೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

ಚೀನಾ ತೈಪಿಯ ಹ್ಸಿಯಾ ಪಿ ಶಾನ್ ಮತ್ತು ಹುಂಗ್‌ ಎನ್‌–ತ್ಸು ಜೋಡಿ ನಾಲ್ಕರ ಘಟ್ಟದ ಪಂದ್ಯದಲ್ಲಿ 21–17, 16–21, 21–10 ರಿಂದ ಮೂರನೇ ಶ್ರೇಯಾಂಕದ ಟ್ರೀಸಾ–ಗಾಯತ್ರಿ ಜೋಡಿಯನ್ನು ಸೋಲಿಸಿ ಫೈನಲ್‌ಗೆ ಮುನ್ನಡೆಯಿತು.

ADVERTISEMENT

ವಿಶ್ವ ಕ್ರಮಾಂಕದಲ್ಲಿ 23ನೇ ಸ್ಥಾನದಲ್ಲಿರುವ ಟ್ರೀಸಾ– ಗಾಯತ್ರಿ ಅವರು ವಿಶ್ವ ಕ್ರಮಾಂಕದಲ್ಲಿ 54ನೇ ಸ್ಥಾನದಲ್ಲಿರುವ ಎದುರಾಳಿಗೆ ಈ ವರುಷ ಮೂರನೇ ಬಾರಿ ಸೋತಂತಾಗಿದೆ.

ಹ್ಸಿಯಾ ಪಿ ಶಾನ್ ಮತ್ತು ಹುಂಗ್‌ ಎನ್‌–ತ್ಸು ಜೋಡಿ ಭಾನುವಾರ ನಡೆಯುವ ಫೈನಲ್‌ನಲ್ಲಿ ಚೀನಾದ ಲೀ ವೆನ್‌ ಮಿ– ಝಾಂಗ್‌ ಶುಕ್ಸಿಯಾನ್ ಅವರನ್ನು ಎದುರಿಸಲಿದೆ. ಮಿ– ಝಾಂಗ್ ಜೋಡಿ ಇನ್ನೊಂದು ಸೆಮಿಫೈನಲ್‌ನಲ್ಲಿ ಚುನ್‌ ಯುನ್ ಯಾಂಗ್– ಚಾನ್ ನಿಕೋಲ್ ಗೊನ್ವಾಲ್ವೆಸ್‌ ಜೋಡಿಯನ್ನು 21–12, 21–6 ರಿಂದ ಸೋಲಿಸಿತು.

ಮೊದಲ ಗೇಮ್‌ನಲ್ಲಿ ಹಣಾಹಣಿ ಕಂಡು ಬಂತು. ಸ್ಕೋರ್‌ 8–8, ನಂತರ 15–15ರಲ್ಲಿ ಸಮಗೊಂಡಿತು. ಆದರೆ ಈ ಹಂತದಲ್ಲಿ ಚೀನಾದ ಜೋಡಿ ಹಿಡಿತ ಸಾಧಿಸಿ ಗೇಮ್ ಗಳಿಸಿತು. ಎರಡನೇ ಗೇಮ್‌ನ ಆರಂಭದಲ್ಲಿ ಪೈಪೋಟಿಯಿದ್ದು, ಭಾರತದ ಆಟಗಾರ್ತಿಯರು ಒಂದು ಹಂತದಲ್ಲಿ 11–10 ರಲ್ಲಿ ಮುನ್ನಡೆ ಪಡೆದಿದ್ದರು. ಅಂತಿಮವಾಗಿ ಗೇಮ್ ಗೆದ್ದ ಕಾರಣ ಪಂದ್ಯ ನಿರ್ಣಾಯಕ ಗೇಮ್‌ಗೆ ಬೆಳೆಯಿತು. ಈ ಗೇಮ್‌ನಲ್ಲಿ ನಾಗಾಲೋಟದಲ್ಲಿ ಸಾಗಿದ ಚೀನಾ ತೈಪಿ ಆಟಗಾರ್ತಿಯರು 14–2 ಮುನ್ನಡೆ ಪಡೆದಿದ್ದರು. ಟ್ರೀಸಾ–ಗಾಯತ್ರಿ ಇದನ್ನು 10–18ಕ್ಕೆ ತಗ್ಗಿಸಿದರೂ, ತೈಪಿ ಆಟಗಾರ್ತಿಯರ ಗೆಲುವು ತಡೆಯಲಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.