ನ್ಯೂಯಾರ್ಕ್: ಬ್ರಿಟನ್‌ನ ಆ‌್ಯಂಡಿ ಮರ್ರೆ ಅವರು ಅಮೆರಿಕ ಓಪನ್ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
ಸೋಮವಾರ ರಾತ್ರಿ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 7-5, 6-3, 6-3ರಿಂದ ಅರ್ಜೆಂಟೀನಾದ ಫ್ರಾನ್ಸಿಸ್ಕೊ ಸೆರುಂಡೊಲೊ ಅವರನ್ನು ಪರಾಭವಗೊಳಿಸಿದರು. 2012ರಲ್ಲಿ ಇದೇ ದಿನ ಆ್ಯಂಡಿ ತಮ್ಮ ಮೊದಲ ಗ್ರ್ಯಾನ್‌ಸ್ಲಾಮ್ (ಅಮೆರಿಕ ಓಪನ್) ಪ್ರಶಸ್ತಿ ಜಯಿಸಿದ್ದರು.
35 ವರ್ಷದ ಆಟಗಾರ ಆ್ಯಂಡಿ, 2017ರ ಬಳಿಕ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಮೊದಲ ಬಾರಿ ನೇರ ಸೆಟ್‌ಗಳ ಜಯ ಸಾಧಿಸಿದರು.
ವಿಶ್ವದ ಅಗ್ರಕ್ರಮಾಂಕದ ಆಟಗಾರ, ರಷ್ಯಾದ ಡೇನಿಯಲ್ ಮೆಡ್ವೆಡೆವ್6-2, 6-4, 6-0ರಿಂದ ಅಮೆರಿಕದ ಸ್ಟೆಫಾನ್ ಕೊಜ್‌ಲೊವ್ ಎದುರು ಗೆದ್ದು ಎರಡನೇ ಸುತ್ತು ಪ್ರವೇಶಿಸಿದರು.
ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯಗಳಲ್ಲಿ ಫ್ರಾನ್ಸ್‌ನ ಕರೋಲಿನ್ ಗಾರ್ಸಿಯಾ6-2, 6-4ರಿಂದ ಕ್ಯಾಮಿಲಾ ರಖಿಮೊವಾ ಎದುರು, ಅಮೆರಿಕದ ಅಲಿಸನ್ ರಿಸ್ಕೆ6-2, 6-4ರಿಂದ ತಮ್ಮದೇ ದೇಶದ ಎಲೆನಾ ಯು ಎದುರು ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.