ADVERTISEMENT

ಟೆನಿಸ್‌ ಟೂರ್ನಿ: ಆ್ಯಶ್ಲೆ ಬಾರ್ಟಿಗೆ ಪ್ರಶಸ್ತಿ

ಏಜೆನ್ಸೀಸ್
Published 19 ಜನವರಿ 2020, 19:45 IST
Last Updated 19 ಜನವರಿ 2020, 19:45 IST
ಪ್ರಶಸ್ತಿಯೊಂದಿಗೆ ಆ್ಯಶ್ಲೆ ಬಾರ್ಟಿ–ಎಎಫ್‌ಪಿ ಚಿತ್ರ
ಪ್ರಶಸ್ತಿಯೊಂದಿಗೆ ಆ್ಯಶ್ಲೆ ಬಾರ್ಟಿ–ಎಎಫ್‌ಪಿ ಚಿತ್ರ   

ಅಡಿಲೇಡ್‌: ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಶನಿವಾರ ಅಡಿಲೇಡ್‌ ಅಂತರರಾಷ್ಟ್ರೀಯ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಆ ಮೂಲಕ ತವರಿನಲ್ಲಿ ಆಸ್ಟ್ರೇಲಿಯಾ ಎದುರಿಸಿದ್ದ ಒಂಬತ್ತು ವರ್ಷಗಳ ಪ್ರಶಸ್ತಿ ಬರ ನೀಗಿಸಿದರು.

ಮಹಿಳಾ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಅವರು ಉಕ್ರೇನ್‌ನ ಡಯಾನಾ ಯಸ್ತರ್‌ಮ್ಸಕಾ ಎದುರು 6–2, 7–5ರಿಂದ ಗೆದ್ದರು.

ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಬಾರ್ಟಿ 2011ರ ಬಳಿಕ ತವರಿನಂಗಳದಲ್ಲಿ ಪ್ರಶಸ್ತಿ ಜಯಿಸಿದ ಆಸ್ಟ್ರೇಲಿಯಾದ ಮೊದಲ ಮಹಿಳೆ ಎನಿಸಿಕೊಂಡರು. 2011ರಲ್ಲಿ ಜರ್ಮಿಲಾ ವೊಲ್ಫ್‌ ಅವರು ಹೋಬರ್ಟ್‌ನಲ್ಲಿ ಚಾಂಪಿಯನ್‌ ಆಗಿದ್ದರು. ಫೈನಲ್‌ ಹಣಾಹಣಿಯ ಮೊದಲ ಸೆಟ್‌ನಲ್ಲಿ ಎರಡು ಪಾಯಿಂಟ್ಸ್ ಕಳೆದುಕೊಂಡ ಬಾರ್ಟಿ, ಮೂರು ಬಾರಿ ಎದುರಾಳಿಯ ಸರ್ವ್‌ ಮುರಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.