ಬೊಸ್ತಾದ್, ಸ್ವೀಡನ್ (ಎಪಿ): ಸ್ಪೇನ್‌ನ ರಫೆಲ್ ನಡಾಲ್ ಅವರು ನಾರ್ಡಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು.
ಎರಡು ವರ್ಷಗಳ ಬಳಿಕ ಟೂರ್ನಿಯೊಂದರಲ್ಲಿ ಫೈನಲ್ ಪ್ರವೇಶಿಸಿದ್ದ 38 ವರ್ಷದ ನಡಾಲ್ ಅವರ ಗೆಲುವಿನ ಓಟಕ್ಕೆ ಪೋರ್ಚುಗಲ್‌ನ ನುನೊ ಬೋರ್ಗೆಸ್ ತಡೆಯೊಡ್ಡಿದರು. ಏಳನೇ ಶ್ರೇಯಾಂಕದ ಬೋರ್ಗೆಸ್ 6-3, 6-2 ಸೆಟ್‌ಗಳಿಂದ ಗೆದ್ದು, ಪ್ರಶಸ್ತಿ ಯನ್ನು ಮುಡಿಗೇರಿಸಿಕೊಂಡರು. 2022ರ ಫ್ರೆಂಚ್ ಓಪನ್ ನಂತರ ನಡಾಲ್‌ಗೆ ಇದು ಮೊದಲ ಫೈನಲ್ ಆಗಿತ್ತು.
2005ರಲ್ಲಿ ನಡಾಲ್ 19 ವರ್ಷದವರಾಗಿದ್ದಾಗ ನಾರ್ಡಿಯಾ ಓಪನ್ ಪ್ರಶಸ್ತಿ ಗೆದ್ದ ನಂತರ ಮೊದಲ ಬಾರಿಗೆ ಟೂರ್ನಿಯಲ್ಲಿ ಆಡಿದರು. ಅವರು ಇದೇ 26ರಂದು ಆರಂಭವಾಗುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.