ADVERTISEMENT

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಸ್ಪರ್ಧಾಕಣಕ್ಕೆ ಜೊಕೊವಿಚ್‌ ಸಜ್ಜು

ಏಜೆನ್ಸೀಸ್
Published 30 ಜೂನ್ 2024, 23:21 IST
Last Updated 30 ಜೂನ್ 2024, 23:21 IST
ನೊವಾಕ್ ಜೊಕೊವಿಚ್
ನೊವಾಕ್ ಜೊಕೊವಿಚ್   

ಲಂಡನ್‌: ಏಳು ಬಾರಿಯ ಚಾಂಪಿಯನ್‌ ನೊವಾಕ್‌ ಜೊಕೊವಿಚ್‌ ಅವರು ಇಲ್ಲಿ ಸೋಮ ವಾರ ಆರಂಭವಾಗುವ ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಫ್ರೆಂಚ್‌ ಓಪನ್ ಟೂರ್ನಿ ನಲ್ಲಿ ಮೊಣಕಾಲಿನ ನೋವಿನಿಂದ ಹಿಂದೆ ಸರಿದಿದ್ದ ಅವರು ಈಗ ಚೇತರಿಸಿಕೊಂಡು,
ಇದೀಗ ದಾಖಲೆಯ 25ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಯತ್ತ ಚಿತ್ತ ಹರಿಸಿದ್ದಾರೆ.

37 ವರ್ಷದ ಸರ್ಬಿಯಾದ ಆಟಗಾರ ಕಳೆದ ವರ್ಷ ಇಲ್ಲಿ ಫೈನಲ್‌ ನಲ್ಲಿ ಕಾರ್ಲೋಸ್‌ ಅಲ್ಕರಾಜ್‌ ಅವರಿಗೆ ಮಣಿದು, ರನ್ನರ್‌ ಅಪ್ ಸ್ಥಾನ ಪಡೆದಿ ದ್ದರು. ಒಟ್ಟು 24ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ಅವರು, ಈ ಋತುವಿ ನಲ್ಲಿ ಪ್ರಶಸ್ತಿಯ ಬರ ಎದುರಿಸುತ್ತಿದ್ದಾರೆ. ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿ ಲಂಡನ್‌ಗೆ ಬಂದಿಳಿದಿರುವ ಅವರು ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. 

ಜೊಕೊವಿಚ್‌ ಇಲ್ಲಿ 2011, 2014, 2015, 2018, 2019, 2021, 2022ರಲ್ಲಿ ಚಾಂಪಿಯನ್‌ ಕಿರೀಟ ಧರಿಸಿದ ದಾಖಲೆ ಹೊಂದಿದ್ದಾರೆ. ‌ರೋಜರ್ ಫೆಡರರ್ ದಾಖಲೆಯ ಎಂಟು ಬಾರಿ ವಿಂಬಲ್ಡನ್‌ ಪ್ರಶಸ್ತಿ ಗೆದ್ದಿದ್ದಾರೆ. ಈ ಬಾರಿ ಜೊಕೊವಿಚ್‌ ಇಲ್ಲಿ ಚಾಂಪಿಯನ್‌ ಆದರೆ ಫೆಡರರ್‌ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಜೊಕೊವಿಚ್‌ ಅವರು ಮಂಗಳವಾರ 123ನೇ ಕ್ರಮಾಂಕದ ಜೆಕ್ ಗಣರಾಜ್ಯದ ವಿಟ್ ಕೊಪ್ರಿವಾ ಅವರ ವಿರುದ್ಧ ಅಭಿಯಾನ ಆರಂಭಿಸುವರು. 

ADVERTISEMENT

ಜೂನ್‌ನಲ್ಲಿ ನಡೆದ ಫ್ರೆಂಚ್‌ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಹಂತ ತಲುಪಿದ್ದ ಜೊಕೊವಿಚ್‌, ನಾರ್ವೆಯ ಕ್ಯಾಸ್ಪರ್‌ ರುಡ್‌ ಅವರನ್ನು ಎದುರಿಸಬೇಕಿತ್ತು. ಹಿಂದೆ ಸರಿದ ನಂತರ ಜೊಕೊವಿಚ್‌ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದರು. ಇಟಲಿಯ 22 ವರ್ಷದ ಯಾನಿಕ್ ಸಿನ್ನರ್ ಅವರು ಅಗ್ರ ಕ್ರಮಾಂಕಕ್ಕೆ ಏರಿದ್ದರು. ಆ ಟೂರ್ನಿಯಲ್ಲಿ ಸ್ಪೇನ್‌ನ 21 ವರ್ಷ ವಯಸ್ಸಿನ ಅಲ್ಕರಾಜ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಸಿನ್ನರ್‌ ಮತ್ತು ಮೂರನೇ ಕ್ರಮಾಂಕದ ಅಲ್ಕರಾಜ್‌, ನಾಲ್ಕನೇ ಕ್ರಮಾಂಕದ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಸ್ಪರ್ಧಾ ಕಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.