ಪ್ಯಾರಿಸ್: ಟೆನಿಸ್ ಲೋಕದ ಅಗ್ರ ಶ್ರೇಯಾಂಕಿತ ಆಟಗಾರರಾದ ನೊವಾಕ್ ಜೊಕೊವಿಚ್ ಹಾಗೂ ರಫೇಲ್ ನಡಾಲ್ ಅವರು ಪ್ಯಾರಿಸ್ ಒಲಿಂಪಿಕ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ.
ಸರ್ಬಿಯಾದ ಜೊಕೊವಿಚ್ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಎದುರು ಹಾಗೂ ಸ್ಪೇನ್‌ನ ನಡಾಲ್ ಅವರು ಹಂಗೇರಿಯ ಮಾರ್ಟನ್ ಫುಕ್ಸೊವಿಕ್ಸ್ ಎದುರು ಜುಲೈ 27ರಂದು ಮೊದಲ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ. ವಿಜೇತರು ಜುಲೈ 29ರಂದು ನಡೆಯುವ ಎರಡನೇ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದಾರೆ.
ಫ್ರೆಂಚ್ ಒಪನ್ ಹಾಗೂ ವಿಂಬಲ್ಡನ್ ಚಾಂಪಿಯನ್, ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಅವರು ಲೆಬನಾನ್ ಆಟಗಾರ ಹ್ಯಾಡಿ ಹಬೀಬ್ ಎದುರು ಮೊದಲ ಸುತ್ತಿನಲ್ಲಿ ಸೆಣಸಲಿದ್ದಾರೆ.
ಪ್ರಮುಖ ಟೂರ್ನಿಗಳಲ್ಲಿ 22 ಬಾರಿ ಪ್ರಶಸ್ತಿ ಗೆದ್ದಿರುವ 38 ವರ್ಷದ ನಡಾಲ್, 14 ಸಲ ಫ್ರೆಂಚ್ ಓಪನ್ ಚಾಂಪಿಯನ್ ಪಟ್ಟಕ್ಕೇರಿದ ದಾಖಲೆ ಹೊಂದಿದ್ದಾರೆ.
ನಡಾಲ್ 2008ರಲ್ಲಿ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. 2016ರ ರಿಯೊ ಡಿ ಜನೈರೊ ಒಲಿಂಪಿಕ್‌ನಲ್ಲಿ ಮಾರ್ಕ್ ಲೊಪೇಜ್ ಅವರೊಂದಿಗೆ ಡಬಲ್ಸ್‌ನಲ್ಲೂ 'ಬಂಗಾರ' ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.