ರೋಮ್: ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರ ಸವಾಲನ್ನು ದಿಟ್ಟತನದಿಂದ ಮೆಟ್ಟಿ ನಿಂತ ಸರ್ಬಿಯಾದ ನೊವಾಕ್ ಜೊಕೊವಿಚ್ ಇಲ್ಲಿ ನಡೆಯುತ್ತಿರುವ ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ನಾಲ್ಕರ ಘಟ್ಟ ಪ್ರವೇಶಿಸಿದರು.
ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಒಂದನೇ ಸ್ಥಾನದಲ್ಲಿರುವ ನೊವಾಕ್‌ಗೆ ಮಾಜಿ ಅಮೆರಿಕ ಓಪನ್ ಚಾಂಪಿಯನ್ ಡೆಲ್ ಪೊಟ್ರೊ ಕ್ವಾರ್ಟರ್ ಫೈನಲ್ ಪಂದ್ಯದ ಆರಂಭದಿಂದಲೇ ಭಾರಿ ಪೈಪೋಟಿ ನೀಡಿದರು. ಹೀಗಾಗಿ ಪಂದ್ಯ ಪ್ರತಿ ಕ್ಷಣವೂ ರೋಚಕವಾಗಿತ್ತು.
ಮೂರು ತಾಸು ನಡೆದ ರೋಚಕ ಪಂದ್ಯದ ಮೊದಲ ಸೆಟ್‌ನಲ್ಲಿ 4–6ರ ಹಿನ್ನಡೆ ಕಂಡ ಜೊಕೊವಿಚ್ ನಂತರದ ಸೆಟ್‌ಗಳಲ್ಲಿ 7–6 (8/6), 6–4ರಲ್ಲಿ ಮೇಲುಗೈ ಸಾಧಿಸಿ ಪಂದ್ಯ ಗೆದ್ದರು.
ವಿಶ್ವ ಕ್ರಮಾಂಕದ ಒಂಬತ್ತನೇ ಸ್ಥಾನದಲ್ಲಿರುವ ಡೆಲ್ ಪೊಟ್ರೊ ಮೊಣಕಾಲು ನೋವಿನಿಂದಾಗ ಇಂಡಿಯಾನಾ ವೆಲ್ಸ್ ಮತ್ತು ಮಿಯಾಮಿ ಓಪನ್ ಟೂರ್ನಿಯಿಂದ ಹೊರಗೆ ಉಳಿದಿದ್ದರು. ಆದರೆ ಇಲ್ಲಿ ಜೊಕೊವಿಚ್‌ಗೆ ಪ್ರಬಲ ಪೈಪೋಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.