ADVERTISEMENT

ಒಸಾಕಾ, ರಾಡುಕಾನು, ಕೆರ್ಬರ್‌ಗೆ ವಿಂಬಲ್ಡನ್‌ ವೈಲ್ಡ್‌ ಕಾರ್ಡ್‌

ಏಜೆನ್ಸೀಸ್
Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
<div class="paragraphs"><p>ಜಪಾನ್‌ ನವೋಮಿ ಒಸಾಕಾ </p></div>

ಜಪಾನ್‌ ನವೋಮಿ ಒಸಾಕಾ

   

–ಎಎಫ್‌ಪಿ ಚಿತ್ರ

ವಿಂಬಲ್ಡನ್‌ (ಇಂಗ್ಲೆಂಡ್‌): ಮಾಜಿ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್ನರಾದ ನವೋಮಿ ಒಸಾಕಾ, ಕೆರೊಲಿನ್‌ ವೋಜ್ನಿಯಾಕಿ, ಆ್ಯಂಜೆಲಿಕ್‌ ಕೆರ್ಬರ್‌ ಮತ್ತು ಎಮ್ಮಾ ರಾಡುಕಾನು ಅವರಿಗೆ ವಿಂಬಲ್ಡನ್‌ ಚಾಂಪಿಯನ್‌ಷಿಪ್ಸ್‌ಗೆ ‘ವೈಲ್ಡ್‌ ಕಾರ್ಡ್‌’ ಪ್ರವೇಶ ನೀಡಲಾಗಿದೆ.

ADVERTISEMENT

ಹುಲ್ಲಿನಂಕಣದಲ್ಲಿ ನಡೆಯುವ ಈ ಚಾಂಪಿಯನ್‌ಷಿಪ್‌ ಜುಲೈ 1ರಂದು ಆರಂಭವಾಗಲಿದೆ. ನಾಲ್ಕು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ಮಾಜಿ ಅಗ್ರಮಾನ್ಯ ಆಟಗಾರ್ತಿ ಒಸಾಕಾ ಮತ್ತು ಮೂರು ಪ್ರಮುಖ ಟೂರ್ನಿಗಳನ್ನು ಗೆದ್ದಿರುವ ಕೆರ್ಬರ್‌ ಅವರು ಮಾತೃತ್ವ ರಜೆ ಮುಗಿಸಿ ಈ ವರ್ಷದ ಆರಂಭದಲ್ಲಿ ಟೆನಿಸ್‌ಗೆ ಮರಳಿದ್ದಾರೆ.

ಪ್ರಸ್ತುತ 113ನೇ ಸ್ಥಾನದಲ್ಲಿರುವ ಒಸಾಕಾ ಈ ವರ್ಷದ ಫ್ರೆಂಚ್‌ ಓಪನ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಇಗಾ ಶ್ವಾಂಟೆಕ್ ಅವರಿಂದ ಒಂದು ಸೆಟ್‌ ಕಸಿದುಕೊಂಡ ಏಕೈಕ ಆಟಗಾರ್ತಿ ಎನಿಸಿದ್ದರು.

ಮಾಜಿ ಅಮೆರಿಕ ಓಪನ್ ಚಾಂಪಿಯನ್ ರಾಡುಕಾನು ಅವರು 2021ರ ವಿಂಬಲ್ಡನ್‌ನಲ್ಲಿ ನಾಲ್ಕನೇ ಸುತ್ತನ್ನು ತಲುಪಿದ್ದರು. ಎರಡು ವರ್ಷಗಳ ನಂತರ ವಿಂಬಲ್ಡನ್‌ಗೆ ಮರಳುತ್ತಿದ್ದಾರೆ. ಮಣಿಗಂಟಿನ ಗಾಯ ಮತ್ತು ಪಾದದ ಶಸ್ತ್ರಚಿಕಿತ್ಸೆಯಿಂದಾಗಿ ಅವರು ಕಳೆದ ವರ್ಷ ಆಡಿರಲಿಲ್ಲ.

2018ರ ವಿಂಬಲ್ಡನ್‌ ಚಾಂಪಿಯನ್ ಕೆರ್ಬರ್‌, 2016ರಲ್ಲಿ ರನ್ನರ್ ಅಪ್ ಆಗಿದ್ದರು. ಅವರೂ ಮಾಜಿ ಅಗ್ರ ಕ್ರಮಾಂಕದ ಆಟಗಾರ್ತಿ.

ಕಳೆದ ಆಗಸ್ಟ್‌ನಲ್ಲಿ ಮಾತೃತ್ವ ರಜೆಯಿಂದ ಮರಳಿದ್ದ ವೋಜ್ನಿಯಾಕಿ, ವಿಂಬಲ್ಡನ್‌ನಲ್ಲಿ ಎಂದೂ ನಾಲ್ಕನೇ ಸುತ್ತು ದಾಟಿಲ್ಲ. 2019ರ ನಂತರ ಮೊದಲ ಬಾರಿ ಅವರು ಈಗ ಆಡುತ್ತಿದ್ದಾರೆ.

ಮುಖ್ಯ ಸುತ್ತಿಗೆ ನೇರ ಪ್ರವೇಶದ ಇನ್ನೂ ಒಂದು ವೈಲ್ಡ್‌ ಕಾರ್ಡ್‌ ಉಳಿದಿದೆ. ಕಳೆದ ವರ್ಷದ ಜೂನಿಯರ್ ಚಾಂಪಿಯನ್ ಹೆನ್ರಿ ಸೀರ್ಲ್‌ ಸೇರಿ ಏಳು ಮಂದಿ ಆಟಗಾರರನ್ನು ಪುರುಷರ ಅರ್ಹತಾ ಸುತ್ತಿನಲ್ಲಿ ಆಡಲು ಆಹ್ವಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.