ADVERTISEMENT

ಚೀನಾ ಓಪನ್‌ ಗೆದ್ದ ಒಸಾಕಾ

ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಬಾರ್ಟಿಗೆ ನಿರಾಸೆ

ಏಜೆನ್ಸೀಸ್
Published 6 ಅಕ್ಟೋಬರ್ 2019, 16:30 IST
Last Updated 6 ಅಕ್ಟೋಬರ್ 2019, 16:30 IST
ಟ್ರೋಫಿಯೊಂದಿಗೆ ಸಂಭ್ರಮಿಸಿದ ನವೊಮಿ ಒಸಾಕಾ– ರಾಯಿಟರ್ಸ್ ಚಿತ್ರ
ಟ್ರೋಫಿಯೊಂದಿಗೆ ಸಂಭ್ರಮಿಸಿದ ನವೊಮಿ ಒಸಾಕಾ– ರಾಯಿಟರ್ಸ್ ಚಿತ್ರ   

ಬೀಜಿಂಗ್‌: ನವೊಮಿ ಒಸಾಕಾ ಅವರು ವಿಶ್ವದ ಮೊದಲ ಕ್ರಮಾಂಕದ ಆಟಗಾರ್ತಿ ಆ್ಯಶ್ಲೆ ಬಾರ್ಟಿಗೆ ಆಘಾತ ನೀಡಿದರು. ಚೀನಾ ಓಪನ್‌ ಟೆನಿಸ್‌ ಪ್ರಶಸ್ತಿ ಗೆದ್ದು ಬೀಗಿದರು. ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಅವರು 3–6, 6–3, 6–2ರಿಂದ ಜಯ ಸಾಧಿಸಿದರು.

ಜಪಾನ್‌ನ ಒಸಾಕಾ ಹಾಗೂ ಆಸ್ಟ್ರೇಲಿಯಾ ಆಟಗಾರ್ತಿಯ ನಡುವೆ 110 ನಿಮಿಷಗಳವರೆಗೆ ನಡೆದ ಪಂದ್ಯ ಕುತೂಹಲ ಕೆರಳಿಸಿತ್ತು. ಶನಿವಾರ ಸೆಮಿಫೈನಲ್‌ನಲ್ಲಿ ಒಸಾಕಾ, ಹಾಲಿ ಚಾಂಪಿಯನ್‌ ಕರೋಲಿನಾ ವೊಜ್ನಿಯಾಕಿ ಎದುರು ಗೆದ್ದಿದ್ದರು.

23 ವರ್ಷದ ಬಾರ್ಟಿ, 34 ನಿಮಿಷಗಳಲ್ಲಿ ಮೊದಲ ಸೆಟ್‌ ಅನ್ನು ಗೆದ್ದು ಸಂತಸದ ಅಲೆಯಲ್ಲಿ ತೇಲಿದರು. ಗ್ಯಾಲರಿಯಲ್ಲಿದ್ದ ಬಹುತೇಕ ಪ್ರೇಕ್ಷಕರು ಒಸಾಕಾ ಬೆಂಬಲಿಸುತ್ತಿದ್ದರು. ನಾಲ್ಕನೇ ಶ್ರೇಯಾಂಕದ ಒಸಾಕಾ ಎರಡನೇ ಸೆಟ್‌ನ ಆರಂಭದಲ್ಲಿ 4–2 ಮುನ್ನಡೆ ಸಾಧಿಸಿದರು. ಅದೇ ಲಯದಲ್ಲಿ ಮುಂದುವರಿದು ಸೆಟ್‌ ಜಯಿಸಿದರು.

ADVERTISEMENT

ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಒಸಾಕಾ ಇನ್ನಷ್ಟು ಪ್ರಾಬಲ್ಯ ಸಾಧಿಸಿದರು. ಸೆಟ್‌ಅನ್ನು ಸುಲಭವಾಗಿ ಗೆದ್ದು ಸಂಭ್ರಮಿಸಿದರು. ಈ ವರ್ಷ ಜಪಾನ್‌ ಆಟಗಾರ್ತಿಗೆ ಒಲಿದ ಮೂರನೇ ಪ್ರಶಸ್ತಿ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.