ADVERTISEMENT

ಒಸಾಕಗೆ ಪ್ಯಾನ್ ಪೆಸಿಫಿಕ್‌ ಓಪನ್‌ ಪ್ರಶಸ್ತಿ

ರಾಯಿಟರ್ಸ್
Published 22 ಸೆಪ್ಟೆಂಬರ್ 2019, 15:45 IST
Last Updated 22 ಸೆಪ್ಟೆಂಬರ್ 2019, 15:45 IST
ಟ್ರೋಫಿಯೊಂದಿಗೆ ಸಂಭ್ರಮಿಸಿದ ನವೊಮಿ ಒಸಾಕ–ಎಪಿ/ಪಿಟಿಐ ಚಿತ್ರ
ಟ್ರೋಫಿಯೊಂದಿಗೆ ಸಂಭ್ರಮಿಸಿದ ನವೊಮಿ ಒಸಾಕ–ಎಪಿ/ಪಿಟಿಐ ಚಿತ್ರ   

ಟೋಕಿಯೊ: ಜಪಾನ್‌ನ ನವೊಮಿ ಒಸಾಕ, ಪ್ಯಾನ್ಪೆಸಿಫಿಕ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಅವರು ರಷ್ಯಾದ ಅನಸ್ತಾಸಿಯಾ ಪಾವ್ಲಿಚೆಂಕೊವಾ ಎದುರು 6–2, 6–3 ಸೆಟ್‌ಗಳಿಂದ ಜಯ ಸಾಧಿಸಿದರು. ಜನವರಿಯಲ್ಲಿ ಆಸ್ಟ್ರೇಲಿಯನ್‌ ಓಪನ್‌ ಗೆದ್ದ ಬಳಿಕ ಒಸಾಕ ಈ ವರ್ಷ ಗಳಿಸಿದ ಮೊದಲ ಪ್ರಶಸ್ತಿ ಇದು.

ಇಲ್ಲಿ ಅವರು ಟ್ರೋಫಿ ಗೆಲ್ಲುವುದರೊಂದಿಗೆ ಲಯಕ್ಕೆ ಮರಳಿದರು. 24 ವರ್ಷಗಳ ಬಳಿಕಪ್ಯಾನ್ ಪೆಸಿಫಿಕ್‌ ಓಪನ್‌ ಪ್ರಶಸ್ತಿ ಗೆದ್ದ ಜಪಾನ್‌ ಆಟಗಾರ್ತಿ ಎನಿಸಿಕೊಂಡರು. 1995ರಲ್ಲಿ ಕಿಮಿಕೊ ಡಾಟೆ ಇಲ್ಲಿ ಚಾಂಪಿಯನ್‌ ಆಗಿದ್ದರು.

ಶಕ್ತಿಶಾಲಿ ಸರ್ವ್‌ಗಳ ಮೂಲಕ ತವರಿನ ಪ್ರೇಕ್ಷಕರನ್ನು ರಂಜಿಸಿದ ಒಸಾಕಾ, ವಿಶ್ವದ 41ನೇ ರ‍್ಯಾಂಕಿನ ಆಟಗಾರ್ತಿಯ ಎದುರು ಪಾರಮ್ಯ ಮೆರೆದರು. 2016 ಹಾಗೂ 2018ರಲ್ಲಿ ಇಲ್ಲಿ ಫೈನಲ್‌ ತಲುಪಿದ್ದಜಪಾನ್‌ ಆಟಗಾರ್ತಿಗೆ ನಿರಾಸೆ ಎದುರಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.