ADVERTISEMENT

ಆಸ್ಟ್ರೇಲಿಯಾ ಓಪನ್‌ ಟೆನಿಸ್‌| ಕೋವಿಡ್‌ ಇದ್ದರೂ ಆಡಬಹುದು: ಕ್ರೇಗ್ ಟಿಲಿ

ರಾಯಿಟರ್ಸ್
Published 10 ಜನವರಿ 2023, 3:12 IST
Last Updated 10 ಜನವರಿ 2023, 3:12 IST
   

ಮೆಲ್ಬರ್ನ್‌: ಈ ತಿಂಗಳು ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಟೆನಿಸ್‌ ಪಟುಗಳಿಗೆ ಕೋವಿಡ್‌ ಪರೀಕ್ಷೆ ಅಗತ್ಯವಿಲ್ಲ. ಕೊರೊನಾ ಸೋಂಕು ದೃಢಪಟ್ಟರೂ ಅವರು ಆಡಬಹುದು ಎಂದು ಟೂರ್ನಿಯ ನಿರ್ದೇಶಕ ಕ್ರೇಗ್ ಟಿಲಿ ಸೋಮವಾರ ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ಇದ್ದ ಕೋವಿಡ್‌ ನಿಯಮಾವಳಿಗಳಲ್ಲಿ ಆದ ಗಮನಾರ್ಹ ಬದಲಾವಣೆಗಳನ್ನು ಟಿಲಿ ಅವರ ಹೇಳಿಕೆ ಪ್ರತಿಬಿಂಬಿಸಿದೆ.

2021ರ ಟೂರ್ನಿಯನ್ನು ಬಯೋಬಬಲ್‌ನಲ್ಲಿ ನಡೆಸಲಾಗಿತ್ತು. ಕಳೆದ ವರ್ಷ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದ, ಒಂಬತ್ತು ಬಾರಿಯ ಚಾಂಪಿಯನ್‌ ಸರ್ಬಿಯಾದ ಆಟಗಾರ ನೊವಾಕ್ ಜೊಕೊವಿಚ್‌ ಅವರಿಗೆ ಆಡಲು ಆಯೋಜಕರು ಅವಕಾಶ ನೀಡಿರಲಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.