ಈಸ್ಟ್‌ಬರ್ನ್ (ರಾಯಿಟರ್ಸ್): ಅಮೋಘ ಆಟ ಆಡಿದ ಜೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ, ಈಸ್ಟ್‌ಬರ್ನ್ ಟೆನಿಸ್ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಡೆವೊನ್‌ಶೈರ್ ಪಾರ್ಕ್ ಲಾನ್ ಟೆನಿಸ್ ಕ್ಲಬ್‌ನ ಅಂಗಳದಲ್ಲಿ ಶನಿವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪೈಪೋಟಿಯಲ್ಲಿ ಪ್ಲಿಸ್ಕೋವಾ 6–1, 6–4 ನೇರ ಸೆಟ್‌ಗಳಿಂದ ಜರ್ಮನಿಯ ಏಂಜಲಿಕ್ ಕೆರ್ಬರ್‌ಗೆ ಆಘಾತ ನೀಡಿದರು.
ಎರಡನೇ ಶ್ರೇಯಾಂಕದ ಆಟಗಾರ್ತಿ ಪ್ಲಿಸ್ಕೋವಾ ಈ ಪಂದ್ಯದಲ್ಲಿ ಒಟ್ಟು 33 ವಿನ್ನರ್ ಮತ್ತು ಏಳು ಏಸ್‌ಗಳನ್ನು ಸಿಡಿಸಿದರು.
ಜೆಕ್ ಗಣರಾಜ್ಯದ ಆಟಗಾರ್ತಿಯ ಶರವೇಗದ ಸರ್ವ್‌ಗಳು ಮತ್ತು ಬಲಿಷ್ಠ ಮುಂಗೈ ಹೊಡೆತಗಳಿಗೆ ವಿಂಬಲ್ಡನ್ ಚಾಂಪಿಯನ್ ಕೆರ್ಬರ್ ಕಂಗಾಲಾದರು.
ಕೆರ್ಬರ್ ಅವರು ಈಸ್ಟ್‌ಬರ್ನ್ ಟೂರ್ನಿಯಲ್ಲಿ ಸತತ ಮೂರನೇ ಸಲ ಫೈನಲ್‌ನಲ್ಲಿ ಸೋತಿದ್ದಾರೆ.ಮುಂದಿನ ವಾರ ನಡೆಯುವ ವಿಂಬಲ್ಡನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಕೆರ್ಬರ್ ಅವರು ತತಜಾನ ಮರಿಯಾ ಎದುರು ಸೆಣಸಲಿದ್ದಾರೆ.
ಪ್ಲಿಸ್ಕೋವಾಗೆ ಮೊದಲ ಸುತ್ತಿನಲ್ಲಿ ಚೀನಾದ ಲಿನ್ ಜು ಸವಾಲು ಎದುರಾಗಲಿದೆ.ಈ ಹೋರಾಟ ಸೋಮವಾರ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.