ADVERTISEMENT

ಟೆನಿಸ್: ಪ್ಲಿಸ್ಕೋವ–ಪೆಟ್ರಾ ಫೈನಲ್ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 20:40 IST
Last Updated 14 ಸೆಪ್ಟೆಂಬರ್ 2019, 20:40 IST
ಪೆಟ್ರಾ ಮಾರ್ಟಿಕ್ –ಎಎಫ್‌ಪಿ ಚಿತ್ರ
ಪೆಟ್ರಾ ಮಾರ್ಟಿಕ್ –ಎಎಫ್‌ಪಿ ಚಿತ್ರ   

ಬೀಜಿಂಗ್‌ (ಎಎಫ್‌ಪಿ/ರಾಯಿಟರ್ಸ್‌): ವಿಶ್ವ ಕ್ರಮಾಂಕದ ಎರಡನೇ ಸ್ಥಾನದಲ್ಲಿರುವ ಕರೋಲಿನಾ ಪ್ಲಿಸ್ಕೋವ ಮತ್ತು ಕ್ರೊವೇಷ್ಯಾದ ಪೆಟ್ರಾ ಮಾರ್ಟಿಕ್ ಅವರು ಡಬ್ಲ್ಯುಟಿಎ ಜೆಂಗ್ಜು ಓಪನ್ ಟೆನಿಸ್ ಟೂರ್ನಿಯ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್‌ ಪಂದ್ಯಗಳಲ್ಲಿ ಪ್ಲಿಸ್ಕೋವ 6–3, 6–2ರಲ್ಲಿ ಅಜ್ಲಾ ತೊಮ್ಜನೊವಿಚ್‌ ಎದುರು ಗೆದ್ದರೆ ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೊವಿಚ್‌ ಎದುರು ಪೆಟ್ರಾ 6–0, 6–3ರಲ್ಲಿ ಗೆದ್ದರು.

ಜೆಕ್ ಗಣರಾಜ್ಯದ ಕರೋಲಿನಾ 69 ನಿಮಿಷಗಳಲ್ಲಿ ಆಸ್ಟ್ರೇಲಿಯಾ ಆಟಗಾರ್ತಿಯನ್ನು ಮಣಿಸಿದರು. ಪೆಟ್ರಾ ಮತ್ತು ಕ್ರಿಸ್ಟಿನಾ ನಡುವಿನ ಪಂದ್ಯ 67 ನಿಮಿಷಗಳಲ್ಲಿ ಮುಗಿಯಿತು. ಫೈನಲ್ ಪಂದ್ಯ ಭಾನುವಾರ ನಡೆಯಲಿದೆ.

ADVERTISEMENT

ಈ ವರ್ಷ ಬ್ರಿಸ್ಬೇನ್ ಮತ್ತು ರೋಮ್‌ನಲ್ಲೂ ಅಜ್ಲಾ ಎದುರು ಗೆದ್ದಿದ್ದ ಪ್ಲಿಸ್ಕೋವ ಇಲ್ಲಿ ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿದರು. ಪ್ರಬಲ ಸರ್ವ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಅವರು ನಾಲ್ಕು ಬಾರಿ ಸರ್ವ್ ಮುರಿದರು. ಪ್ಲಿಸ್ಕೋವ ಇಡೀ ಪಂದ್ಯದಲ್ಲಿ ಸತತ ಮೂರು ಡಬಲ್ ಫಾಲ್ಟ್ ಮಾಡಿದ್ದು ಬಿಟ್ಟರೆ ಉಳಿದಂತೆ ಯಾವ ಹಂತದಲ್ಲೂ ತಪ್ಪು ಎಸಗಲಿಲ್ಲ. ಆದರೆ ಅಜ್ಲಾ 13 ಅನ್‌ಫೋರ್ಸ್‌ಡ್ ಎರರ್ಸ್ ಎಸಗಿದರು.

ಸತತ ಏಳು ಗೇಮ್‌ಗಳನ್ನು ಗೆದ್ದು ರಂಜಿಸಿದ ಮಾರ್ಟಿಕ್ ಎದುರು ಕ್ರಿಸ್ಟಿನಾ ಮಂಕಾದರು. ಆರು ಡಬಲ್ ಫಾಲ್ಟ್‌ಗಳನ್ನು ಎಸಗಿದ ಕ್ರಿಸ್ಟಿನಾ ಏಕೈಕ ಬ್ರೇಕ್ ಪಾಯಿಂಟ್ ಗಳಿಸಿದ್ದರು. ಮಾರ್ಟಿಕ್ ನಾಲ್ಕು ಬ್ರೇಕ್ ಪಾಯಿಂಟ್ ಕಲೆ ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.