ADVERTISEMENT

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ಪ್ರಧಾನ ಸುತ್ತಿಗೆ ಪ್ರಜ್ಞೇಶ್‌

ಪಿಟಿಐ
Published 18 ಜನವರಿ 2020, 19:30 IST
Last Updated 18 ಜನವರಿ 2020, 19:30 IST
ಪ್ರಜ್ಞೇಶ್‌ ಗುಣೇಶ್ವರನ್‌
ಪ್ರಜ್ಞೇಶ್‌ ಗುಣೇಶ್ವರನ್‌   

ಮೆಲ್ಬರ್ನ್‌: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಸೋತರೂ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಆಡುವ ಅವಕಾಶ ಪಡೆದರು. ಅವರು ಮೊದಲ ಸುತ್ತಿನಲ್ಲಿ ಗೆದ್ದರೆ ವಿಶ್ವದ ಎರಡನೇ ಕ್ರಮಾಂಕದ ಆಟಗಾರ ನೊವಾಕ್‌ ಜೊಕೊವಿಚ್‌ (ಸರ್ಬಿಯಾ) ಅವರನ್ನು ಎದುರಿಸಬೇಕಾಗುತ್ತದೆ.

ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿಎಡಗೈ ಆಟಗಾರ ಪ್ರಜ್ಞೇಶ್‌ ಲಾತ್ವಿಯಾದ ಅರ್ನೆಸ್ಟ್ಸ್ ಗುಲ್ಬಿಸ್‌ ಎದುರು ಸೋತಿದ್ದರು. ಆದರೆ ಟೂರ್ನಿಗೆ ನೇರ ಪ್ರವೇಶ ಪಡೆದಿದ್ದ ಆಟಗಾರನೊಬ್ಬ ಹಿಂದೆ ಸರಿದ ಕಾರಣ ಪ್ರಜ್ಞೇಶ್‌ ಅವರಿಗೆ ಅವಕಾಶ ಒಲಿದಿದೆ.

ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ಪ್ರಜ್ಞೇಶ್‌ ಅವರು 22ನೇ ರ‍್ಯಾಂಕ್‌ನ ಜಪಾನ್‌ ಆಟಗಾರ ತತ್ಸುಮಾ ಇಟೊ ಸವಾಲನ್ನು ಎದುರಿಸಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.