ADVERTISEMENT

US Open 2024 | ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್ ಪ್ರವೇಶಿಸಿದ ಬೋಪಣ್ಣ ಜೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಸೆಪ್ಟೆಂಬರ್ 2024, 8:53 IST
Last Updated 1 ಸೆಪ್ಟೆಂಬರ್ 2024, 8:53 IST
<div class="paragraphs"><p>ರೋಹನ್ ಬೋಪಣ್ಣ,&nbsp;ಅಲ್ಡಿಲಾ ಸುಟ್‌ಜಿಯಾಡಿ</p></div>

ರೋಹನ್ ಬೋಪಣ್ಣ, ಅಲ್ಡಿಲಾ ಸುಟ್‌ಜಿಯಾಡಿ

   

(ಚಿತ್ರ ಕೃಪೆ: X/@SonySportsNetwk)

ನ್ಯೂಯಾರ್ಕ್: ಪ್ರತಿಷ್ಠಿತ ಅಮೆರಿಕ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಇಂಡೋನೇಷ್ಯಾದ ಅಲ್ಡಿಲಾ ಸುಟ್‌ಜಿಯಾಡಿ ಜೋಡಿ, ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.

ADVERTISEMENT

ಎಂಟನೇ ಶ್ರೇಯಾಂಕ ಪಡೆದಿರುವ ಬೋಪಣ್ಣ-ಅಲ್ಡಿಲಾ ಜೋಡಿ, ಆಸ್ಟ್ರೇಲಿಯಾದ ಜಾನ್ ಪಿಯರ್ಸ್ ಹಾಗೂ ಜೆಕ್ ಗಣರಾಜ್ಯದ ಕ್ಯಾತೆರಿನಾ ಸಿನಿಯಾಕೋವಾ ವಿರುದ್ಧ 0-6, 7-6(5), 10-7ರ ಅಂತರದಲ್ಲಿ ಜಯ ಗಳಿಸಿತು.

ಮೊದಲ ಸೆಟ್ ಅನ್ನು ಕಳೆದುಕೊಂಡ ಬೋಪಣ್ಣ ಜೋಡಿ ಹಿನ್ನಡೆ ಅನುಭವಿಸಿತು. ಆದರೆ ಜಿದ್ದಾಜಿದ್ದಿನಿಂದ ಕೂಡಿದ ಪಂದ್ಯದಲ್ಲಿ ಕೊನೆಯ ಎರಡೂ ಸೆಟ್‌, ಟ್ರೈಬ್ರೇಕರ್‌ನಲ್ಲಿ ಗೆದ್ದು ಮುನ್ನಡೆಯಿತು.

ಮುಂದಿನ ಸುತ್ತಿನಲ್ಲಿ ಬೋಪಣ್ಣ ಜೋಡಿಗೆ ನಾಲ್ಕನೇ ಶ್ರೇಯಾಂಕಿತ ಮ್ಯಾಥ್ಯೂ ಎಬ್ಡೆನ್‌ ಹಾಗೂ ಬಾರ್ಬೊರಾ ಕ್ರೆಜಿಕೋವಾ ಸವಾಲು ಎದುರಾಗಲಿದೆ.

ಪುರುಷ ಡಬಲ್ಸ್ ವಿಭಾಗದಲ್ಲಿ ಬೋಪಣ್ಣ-ಎಬ್ಡೆನ್ ಜೋಡಿ ಮೂರನೇ ಹಂತಕ್ಕೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.