ADVERTISEMENT

ಗಂಡು ಮಗುವಿಗೆ ಜನ್ಮ ನೀಡಿದ ರಷ್ಯಾದ ಮಾಜಿ ಟೆನಿಸ್ ಆಟಗಾರ್ತಿ ಶರಪೋವಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2022, 5:54 IST
Last Updated 16 ಜುಲೈ 2022, 5:54 IST
(ಚಿತ್ರ ಕೃಪೆ: instagram/mariasharapova)
(ಚಿತ್ರ ಕೃಪೆ: instagram/mariasharapova)   

ನ್ಯೂಯಾರ್ಕ್: ಐದು ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್, ವಿಶ್ವದ ಮಾಜಿ ನಂ.1 ಟೆನಿಸ್ ಆಟಗಾರ್ತಿ ರಷ್ಯಾದ ಮರಿಯಾ ಶರಪೋವಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಸಂತೋಷದ ವಿಷಯವನ್ನು ಶರಪೋವಾಇನ್‌ಸ್ಟಾಗ್ರಾಂನಲ್ಲಿಹಂಚಿಕೊಂಡಿದ್ದಾರೆ. 'ನಮ್ಮ ಕುಟುಂಬಕ್ಕೆ ದೊರಕಬಹುದಾದ ಅತ್ಯಂತ ಸುಂದರ, ಸವಾಲಿನಿಂದ ಕೂಡಿದ ಅರ್ಹವಾದ ಉಡುಗೊರೆ' ಎಂದು ಉಲ್ಲೇಖಿಸಿದ್ದಾರೆ.

ಮಗುವಿನ ಹೆಸರನ್ನು ಶರಪೋವಾ ಬಹಿರಂಗಪಡಿಸಿದ್ದು, ಥಿಯೋಡೋರ್ ಎಂದು ನಾಮಕರಣ ಮಾಡಿದ್ದಾರೆ.

2020 ಡಿಸೆಂಬರ್‌ನಲ್ಲಿ 35 ವರ್ಷದ ಶರಪೋವಾ, ಬ್ರಿಟಿಷ್ ಉದ್ಯಮಿ ಅಲೆಕ್ಸಾಂಡರ್ ಗಿಲ್ಕೆಸ್ (42) ಅವರೊಂದಿಗಿನ ನಿಶ್ಚಿತಾರ್ಥವನ್ನು ಘೋಷಿಸಿದ್ದರು. ಬಳಿಕ ಕಳೆದ ಏಪ್ರಿಲ್ ತಿಂಗಳಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದರು.

ಇನ್ನು ಟೆನಿಸ್ ವೃತ್ತಿ ಜೀವನದತ್ತ ಕಣ್ಣಾಯಿಸಿದರೆ, 2004ರಲ್ಲಿ ತಮ್ಮ 17ರ ಹರೆಯದಲ್ಲಿ ಮೊದಲ ಬಾರಿಗೆ ವಿಂಬಲ್ಡನ್ ಜಯಿಸಿದ್ದ ಶರಪೋವಾ, 2006ರಲ್ಲಿ ಅಮೆರಿಕನ್ ಓಪನ್, 2008ರಲ್ಲಿ ಆಸ್ಟ್ರೇಲಿಯನ್ ಓಪನ್ ಮತ್ತು 2104ರಲ್ಲಿ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದರು. 2012ರ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನೂ ಗೆದ್ದಿದ್ದರು.

ನಿಷೇಧಿತ ಮದ್ದು ಸೇವನೆ ಆರೋಪದಲ್ಲೂ ಸಿಕ್ಕಿ ಬಿದ್ದಿದ್ದ ಶರಪೋವಾ ಕೊನೆಗೆ 2020ರಲ್ಲಿ ಟೆನಿಸ್‌ಗೆ ವಿದಾಯ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.