ಲಂಡನ್: ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಗಾಗಿ ವಿಶ್ವದ ಮಾಜಿ ಅಗ್ರಮಾನ್ಯ ಟೆನಿಸ್ ಆಟಗಾರ್ತಿ ಸಿಮೊನಾ ಹಲೆಪ್ ಅವರ ಮೇಲೆ ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ.
ಇಂಟರ್‌ನ್ಯಾಷನಲ್ ಟೆನಿಸ್ ಇಂಟೆಗ್ರಿಟಿ ಏಜನ್ಸಿ ಮಂಗಳವಾರ ಈ ವಿಷಯ ತಿಳಿಸಿದೆ. ಕಳೆದ ವರ್ಷ ರುಮೇನಿಯಾದ 31 ವರ್ಷದ ಆಟಗಾರ್ತಿಯು ರೊಕ್ಸಾಡುಸ್ಟಾಟ್ ಎಂಬ ನಿಷೇಧಿತ ಮದ್ದು ಸೇವನೆ ಮಾಡಿದ್ದು ಪತ್ತೆಯಾಗಿತ್ತು. ಈ ಸಲ ಅಥ್ಲೀಟ್ ಬಯಾಲಾಜಿಕಲ್ ಪಾಸ್‌ಪೋರ್ಟ್‌ನಲ್ಲಿ ಆಗಿರುವ ಅಕ್ರಮಗಳಿಗೆ ಸಂಬಂಧಿಸಿ ಅವರ ಮೇಲೆ ಪ್ರತ್ಯೇಕ ಎರಡನೇ ಉಲ್ಲಂಘನೆ ಆರೋಪ ಹೊರಿಸಲಾಗಿದೆ.
2022ರ ಅಕ್ಟೋಬರ್‌ನಿಂದ ಅವರು ತಾತ್ಕಾಲಿಕ ನಿಷೇಧ ಅನುಭವಿಸುತ್ತಿದ್ದಾರೆ. ಈ ಅವಧಿಯೂ ಅವರ ನಾಲ್ಕು ವರ್ಷ ನಿಷೇಧ ಶಿಕ್ಷೆಗೆ ಸೇರಲಿದೆ. ಹೀಗಾಗಿ ಅವರು 2026ರ ಅಕ್ಟೋಬರ್ 6ರವರೆಗೆ ಆಡುವಂತಿಲ್ಲ.
ನಿಷೇಧದ ವಿರುದ್ಧ ಅವರು ಮನವಿ ಸಲ್ಲಿಸಲು ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.