‘ಬಿಗ್ 3’ ಗಳೆಂದು ಹೆಸರಾದ ರೋಜರ್ ಫೆಡರರ್, ರಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಚ್ ಅವರಿಗೆಟೆನಿಸ್‌ನಲ್ಲಿ ಈ ವರ್ಷವೂ ಯುವ ಆಟಗಾರರಿಂದ ಅಂಥ ಸವಾಲು ಎದುರಾಗಲಿಲ್ಲ. ಗ್ರ್ಯಾನ್‍ಸ್ಲಾಮ್ ಟೂರ್ನಿಗಳ ಪೈಕಿ ಜೊಕೊವಿಚ್ ಹಾಗೂನಡಾಲ್ ತಲಾ ಎರಡು ಪ್ರಶಸ್ತಿಗಳನ್ನು ಗಳಿಸಿದರು. ಅಮೆರಿಕ ಹಾಗೂ ಫ್ರೆಂಚ್ ಓಪನ್‍ನಲ್ಲಿ ಸ್ಪೇನ್‍ನ ನಡಾಲ್ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಆಸ್ಟ್ರೇಲಿಯಾ ಓಪನ್ ಹಾಗೂ ವಿಂಬಲ್ಡನ್ ಟೂರ್ನಿಗಳಲ್ಲಿ ಸರ್ಬಿಯಾದ ಜೊಕೊವಿಚ್ ಕಿರೀಟ ಧರಿಸಿದರು. ಫೆಡರರ್, ನೆಚ್ಚಿನ ವಿಂಬಲ್ಡನ್ ಫೈನಲ್‌ಗೆ ಪ್ರವೇಶಿಸಲಷ್ಟೇ ಸಾಧ್ಯವಾಯಿತು.
ನಡಾಲ್ ದಾಖಲೆ
ಫ್ರೆಂಚ್ ಓಪನ್ ಟೂರ್ನಿಯನ್ನು ದಾಖಲೆಯ 12ನೇ ಬಾರಿ ಜಯಿಸಿದ ಹೆಗ್ಗಳಿಕೆಗೆ ನಡಾಲ್ ಅವರದಾಯಿತು.
ವಿಂಬಲ್ಡನ್ ಫೈನಲ್ ರೋಚಕತೆ
ವರ್ಷದ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್– ನೊವಾಕ್ ಜೊಕೊವಿಚ್ ಮುಖಾಮುಖಿಯಾಗಿದ್ದರು. ಪಂದ್ಯದ ಐದನೇ ಸೆಟ್ 12–12 ಗೇಮ್‌ಗಳ ಸಮಬಲ ಕಂಡು ಟೈಬ್ರೇಕ್‌ವರೆಗೆ ಸಾಗಿತ್ತು. ನಾಲ್ಕೂವರೆ ತಾಸಿಗಿಂತ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಸರ್ಬಿಯಾ ಆಟಗಾರ 7–6, 1–6, 7–6, 4–6, 13–12 ರಿಂದ ಗೆದ್ದು ನಿಟ್ಟುಸಿರು ಬಿಟ್ಟರು.
ಭಾರತೀಯರು
ಡೇವಿಸ್ ಕಪ್ ವಿವಾದ
ಅಮೆರಿಕದ 15 ವರ್ಷದ ಬಾಲಕಿ ಕೊಕೊ ಗಫ್ ವಿಂಬಲ್ಡನ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿ ವೀನಸ್ ವಿಲಿಯಮ್ಸ್ ಅವರನ್ನು ಮಣಿಸಿ ಸಂಚಲನ ಸೃಷ್ಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.