ADVERTISEMENT

ಡೇವಿಸ್ ಕಪ್ ತಂಡದಿಂದ ಹಿಂದೆಸರಿದ ನಗಾಲ್

ಪಿಟಿಐ
Published 3 ಸೆಪ್ಟೆಂಬರ್ 2024, 5:00 IST
Last Updated 3 ಸೆಪ್ಟೆಂಬರ್ 2024, 5:00 IST
   

ನವದೆಹಲಿ: ಭಾರತದ ಅಗ್ರ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಅವರು ಇದೇ ತಿಂಗಳ 14 ಮತ್ತು 15ರಂದು ಸ್ವೀಡನ್ ವಿರುದ್ಧ ನಡೆಯುವ ಡೇವಿಸ್‌ ಕಪ್‌ ಪಂದ್ಯದಲ್ಲಿ ಆಡಲಿರುವ ಭಾರತ ತಂಡದಿಂದ ಹಿಂದೆಸರಿದಿದ್ದಾರೆ. ಬೆನ್ನುನೋವಿನ ಕಾರಣ ನೀಡಿದ್ದಾರೆ.

ಅಮೆರಿಕ ಓಪನ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಇತ್ತೀಚೆಗೆ ಮೊದಲ ಸುತ್ತಿನ ಪಂದ್ಯದಲ್ಲಿ ಡಚ್‌ ಆಟಗಾರ ತಲೋನ್ ಗ್ರಿಕ್‌ಸ್ಪೂರ್ ಎದುರು ಸೋತಿದ್ದರು.

ಡೇವಿಸ್‌ ಕಪ್ ಸ್ಟಾಕ್‌ಹೋಮ್‌ನ ಒಳಾಂಗಣ ಹಾರ್ಡ್‌ಕೋರ್ಟ್‌ನಲ್ಲಿ ನಡೆಯಲಿದೆ. ನಗಾಲ್ ಹಿಂದೆಸರಿದಿರುವ ಕಾರಣ ಮೀಸಲು ಆಟಗಾರ ಆರ್ಯನ್ ಶಾ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ಮಾನಸ್‌ ಧಾಮ್ನೆ ಅವರನ್ನು ಸ್ಟ್ಯಾಂಡ್‌ಬೈ ಆಟಗಾರರಾಗಿದ್ದಾರೆ.

ADVERTISEMENT

‘ನಾನು ಸ್ವೀಡನ್ ಎದುರು ಪಂದ್ಯದಲ್ಲಿ ದೇಶವನ್ನು ಪ್ರತಿನಿಧಿಸಲು ಎದುರುನೋಡುತ್ತಿದ್ದೆ. ಆದರೆ ಕೆಲವಾರಗಳಿಂದ ಕಾಡುತ್ತಿದ್ದ ಬೆನ್ನುನೋವಿನ ಕಾರಣ ಮುಂದಿನ ಎರಡು ವಾರ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ. ಇದೇ ಕಾರಣದಿಂದ ನಾನು ಅಮೆರಿಕ ಓಪನ್ ಡಬಲ್ಸ್‌ನಲ್ಲೂ ಭಾಗವಹಿಸಿರಲಿಲ್ಲ’ ಎಂದು ನಗಾಲ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.