ಲಂಡನ್: ಆ್ಯಂಡಿ ಮರ್ರೆ ಅವರುಟೆನಿಸ್‌ನ ಬಹುಮುಖ್ಯ ಆಟಗಾರ. ಗಾಯದಿಂದ ಚೇತರಿಸಿಕೊಂಡು ಅವರು ಆಟಕ್ಕೆ ಮರಳಿರುವುದು ಸಂತಸದ ಸಂಗತಿ ಎಂದು ಸ್ಪೇನ್ ಆಟಗಾರ ರಫೆಲ್ ನಡಾಲ್ ಹೇಳಿದರು.
‘ಹೋದ 10 ವರ್ಷಗಳಲ್ಲಿ ಮರ್ರೆ ಟೆನಿಸ್‌ನ ಅತ್ಯಂತ ಮಹತ್ವದ ಆಟಗಾರರಲ್ಲಿ ಒಬ್ಬರು. ಅವರ ಆಗಮನದಿಂದ ನಾನೊಬ್ಬನೇ ಅಲ್ಲ; ಪ್ರತಿಯೊಬ್ಬರು ಸಂತಸಪಡುವರು’ ಎಂದು 18 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಹೇಳಿದರು.
ಸುಮಾರು ಐದು ತಿಂಗಳು ಗಾಯದಿಂದ ಬಳಲಿದ್ದಬ್ರಿಟನ್‌ನ 32 ವರ್ಷದ ಮರ್ರೆ, ಹೋದ ತಿಂಗಳು ಕ್ವೀನ್ಸ್ ಕ್ಲಬ್ ಟೂರ್ನಿಯಲ್ಲಿ ಫೆಲಿಸಿಯಾನೊ ಲೋಪೆಜ್ ಜೊತೆಗೂಡಿ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು.
ಸದ್ಯ ಪಿಯರೆ ಹ್ಯೂಜಸ್ ಜೊತೆಗೂಡಿ ವಿಂಬಲ್ಡನ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿರುವರು. ಮಿಶ್ರ ಡಬಲ್ಸ್‌ನಲ್ಲೂ ಅದೃಷ್ಟ ಪರೀಕ್ಷೆಗೆ ಸಜ್ಜಾಗಿರುವ ಅವರು, ಸಿಂಗಲ್ಸ್‌ನಲ್ಲಿ ಆಡುತ್ತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.