ADVERTISEMENT

ಟೆನಿಸ್‌: ಫೈನಲ್‌ಗೆ ವಾವ್ರಿಂಕ

ಏಜೆನ್ಸೀಸ್
Published 17 ಫೆಬ್ರುವರಿ 2019, 19:23 IST
Last Updated 17 ಫೆಬ್ರುವರಿ 2019, 19:23 IST
ಸ್ಟಾನಿಸ್ಲಾಸ್‌ ವಾಂವ್ರಿಕ
ಸ್ಟಾನಿಸ್ಲಾಸ್‌ ವಾಂವ್ರಿಕ   

ರಾಟರ್‌ಡ್ಯಾಂ, ನೆದರ್ಲೆಂಡ್ಸ್‌ (ಎಪಿ): ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾಂವ್ರಿಕ ಅವರು ಎಟಿಪಿ ರಾಟರ್‌ಡ್ಯಾಂ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ವಾವ್ರಿಂಕ 6–2, 4–6, 6–4ರಲ್ಲಿ ಜಪಾನ್‌ನ ಕೀ ನಿಶಿಕೋರಿ ಅವರನ್ನು ಪರಾಭವಗೊಳಿಸಿದರು.

ವಾವ್ರಿಂಕ ಅವರು ಎರಡು ವರ್ಷಗಳ ನಂತರ ಎಟಿಪಿ ಟೂರ್ನಿಯೊಂದರಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ ಸಾಧನೆ ಮಾಡಿದರು.

ADVERTISEMENT

ಶ್ರೇಯಾಂಕ ರಹಿತ ಆಟಗಾರ ವಾವ್ರಿಂಕ, ಅಗ್ರಶ್ರೇಯಾಂಕದ ಆಟಗಾರ ನಿಶಿಕೋರಿ ಎದುರು ಸುಲಭವಾಗಿ ಸೋಲುತ್ತಾರೆ ಎಂದೇ ಭಾವಿಸಲಾಗಿತ್ತು. ಈ ನಿರೀಕ್ಷೆಯನ್ನು ಸ್ವಿಟ್ಜರ್‌ಲೆಂಡ್‌ನ ಆಟಗಾರ ಹುಸಿಗೊಳಿಸಿದರು.

ಗ್ರ್ಯಾನ್‌ಸ್ಲಾಮ್‌ನಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿರುವ ವಾವ್ರಿಂಕ ಮೊದಲ ಸೆಟ್‌ನಲ್ಲಿ ಮೋಡಿ ಮಾಡಿದರು. ಚುರುಕಿನ ಸರ್ವ್‌ ಮತ್ತು ಆಕರ್ಷಕ ಹಿಂಗೈ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು.

ಎರಡನೇ ಗೇಮ್‌ನಲ್ಲಿ ಜಪಾನ್‌ನ ನಿಶಿಕೋರಿ ತಿರುಗೇಟು ನೀಡಿದರು. ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನ ಎಂಟು ಗೇಮ್‌ಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ನಂತರ ವಾವ್ರಿಂಕ ಮೋಡಿ ಮಾಡಿದರು.

ಫೈನಲ್‌ನಲ್ಲಿ ವಾವ್ರಿಂಕ, ಗಾಯೆಲ್‌ ಮೊಂಫಿಲ್ಸ್‌ ಎದುರು ಆಡಲಿದ್ದಾರೆ.

ಇನ್ನೊಂದು ಸೆಮಿಫೈನಲ್‌ನಲ್ಲಿ ಮೊಂಫಿಲ್ಸ್‌ 4–6, 6–3, 6–4ರಲ್ಲಿ ಡೇನಿಯಲ್‌ ಮೆಡ್ವೆದೇವ್‌ ಎದುರು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.