ADVERTISEMENT

Tokyo Olympics: ಸೆಮಿಗೆ ಲಗ್ಗೆ ಇಟ್ಟ ಸ್ವಿಟೋಲಿನಾ

ಪಿಟಿಐ
Published 28 ಜುಲೈ 2021, 19:45 IST
Last Updated 28 ಜುಲೈ 2021, 19:45 IST
ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಎಲಿನಾ ಸ್ವಿಟೋಲಿನಾ ಸಂಭ್ರಮ –ರಾಯಿಟರ್ಸ್‌ ಚಿತ್ರ
ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಎಲಿನಾ ಸ್ವಿಟೋಲಿನಾ ಸಂಭ್ರಮ –ರಾಯಿಟರ್ಸ್‌ ಚಿತ್ರ   

ಟೋಕಿಯೊ: ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಬುಧವಾರ ಟೆನಿಸ್‌ ಅಂಗಳದಲ್ಲಿ ಮಿಂಚಿದರು. ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಅವರು ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.

ಎಂಟರ ಘಟ್ಟದ ಹಣಾಹಣಿಯಲ್ಲಿ ಸ್ವಿಟೋಲಿನಾ 6–4, 6–4 ನೇರ ಸೆಟ್‌ಗಳಿಂದ ಇಟಲಿಯ ಕ್ಯಾಮಿಲಾ ಜಿಯೊರ್ಗಿ ವಿರುದ್ಧ ಗೆದ್ದರು.

ಜಪಾನ್‌ನ ನವೊಮಿ ಒಸಾಕ ಕೂಟದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಎಲಿನಾ ಚಿನ್ನದ ಪದಕ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ. ಕೂಟದಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಅವರು ಮುಂದಿನ ಸುತ್ತಿನಲ್ಲಿ ಮಾರ್ಕೆಟಾ ವೊಂಡ್ರೌಸೊವಾ ಎದುರು ಹೋರಾಡಲಿದ್ದಾರೆ. ಜೊಕೊವಿಚ್‌ ಜಯಭೇರಿ: ಪುರುಷರ ಸಿಂಗಲ್ಸ್‌ನಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಗೆಲುವಿನ ಓಟ ಮುಂದುವರಿಸಿದ್ದಾರೆ.

ADVERTISEMENT

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಸರ್ಬಿಯಾದ ಆಟಗಾರ ನೊವಾಕ್‌ 6–3, 6–1ರಿಂದ ಸ್ಪೇನ್‌ನ ಡೇವಿಡ್‌ ಫೊಕಿನಾ ಎದುರು ಜಯಿಸಿದರು. ಇದರೊಂದಿಗೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಮತ್ತೊಂದು ಪಂದ್ಯದಲ್ಲಿ ರಷ್ಯಾದ ಡೇನಿಯಲ್‌ ಮೆಡ್ವೆಡೇವ್‌ 6–2, 3–6, 6–2ರಲ್ಲಿ ಇಟಲಿಯ ಫಾಬಿಯೊ ಫಾಗ್ನಿನಿ ಎದುರು ಜಯಿಸಿದರು.

ಜಪಾನ್‌ನ ಕೀ ನಿಶಿಕೋರಿ 7–6, 6–0ರಿಂದ ಇಲ್ಯಾ ಇವಾಸ್ಕ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.