ADVERTISEMENT

ಟೆನಿಸ್‌: ಸೆಮಿಗೆ ಹೃಷಿಕೇಶ್ ಅಯ್ಯರ್‌

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 20:27 IST
Last Updated 2 ಜುಲೈ 2024, 20:27 IST
   

ಬೆಂಗಳೂರು: ಶ್ರೇಯಾಂಕರಹಿತ ಆಟಗಾರ ಹೃಷಿಕೇಶ್‌ ಅಯ್ಯರ್‌ ಅವರು ಎಸ್‌ಎಟಿ–ಎಐಟಿಎ ಆಶ್ರಯದಲ್ಲಿ ನಡೆಯುತ್ತಿರುವ 16 ವರ್ಷದೊಳಗಿನವರ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಆದರ್ಶ ದಿಲೀಪ್‌ಕುಮಾರ್‌ಗೆ ಅಘಾತ ನೀಡಿದರು.

ಇಲ್ಲಿನ ಎಸ್ಎಟಿ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಬಾಲಕರ ವಿಭಾಗದ ಸಿಂಗಲ್ಸ್ ಪಂದ್ಯದಲ್ಲಿ ಹೃಷಿಕೇಶ್‌ 9–3ರಿಂದ ಆದರ್ಶ ಅವರನ್ನು ಸೋಲಿಸಿ ಸೆಮಿಫೈನಲ್‌ಗೆ ಮುನ್ನಡೆದರು.

ಅಗ್ರ ಶ್ರೇಯಾಂಕದ ಲಿಖಿತ್‌ ಎಸ್‌. ಗೌಡ 9–2ರಿಂದ ಅರ್ಹಾನ್‌ ಜೈನ್‌ ಅವರನ್ನು ಮಣಿಸಿ ನಾಲ್ಕರ ಘಟ್ಟ ಪ್ರವೇಶಿದರು.

ADVERTISEMENT

ಮೂರನೇ ಶ್ರೇಯಾಂಕದ ಅರ್ಜುನ್‌ ಸೂರಿ, ಎರಡನೇ ಶ್ರೇಯಾಂಕದ ಅಯಾನ್‌ ಎಂ.ತೀರನ್‌ ಅವರೂ ಸೆಮಿಫೈನಲ್‌ ತಲುಪಿದರು.

ಬಾಲಕಿಯರ ವಿಭಾಗದ ಸಿಂಗಲ್ಸ್‌ನಲ್ಲಿ ಲಾವಣ್ಯ ತಿವಾರಿ 9–4ರಿಂದ ನಾಲ್ಕನೇ ಶ್ರೇಯಾಂಕದ ತೀರ್ಥ ಎ.ಎನ್‌ ಅವರನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದರು.

ಅಯ್ಲಿನ್ ಎಂ. ಕರ್ನೆಲಿಯೊ 9–4ರಿಂದ ಮೂರನೇ ಶ್ರೇಯಾಂಕದ ತನು ವಿಶ್ವಾಸ್ ಅವರನ್ನು ಸೋಲಿಸಿದರು.

ಅಗ್ರ ಶ್ರೇಯಾಂಕದ ವಿಧಿ ಗುಪ್ತಾ 9-2ರಿಂದ ಅನಿಕಾ ಜೋಸನ್ ವಿರುದ್ಧ ಸುಲಭ ಜಯ ಸಾಧಿಸಿದರೆ, ಪೂಜ್ಯಾ ಪಿ. ಕುಮಾರ್ 9-0ಯಿಂದ ಅಕ್ಷಯಾ ವಿಶ್ವಕರ್ಮ ಅವರನ್ನು ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.