ನ್ಯೂಯಾರ್ಕ್: ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸಿದ ಕೆನಡಾದ ಬಿಯಾಂಕ ಆಂಡ್ರಿಸ್ಕು ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದರು.
ಶನಿವಾರ ನಡೆದ ಫೈನಲ್‌ನಲ್ಲಿಎದುರಾಳಿ ವಿಲಿಯಮ್ಸ್ ಅವರ ದಿಟ್ಟ ದಾಳಿಗೆ ಅಂಜದ ಯುವ ಆಟಗಾರ್ತಿ ಬಿಯಾಂಕ 6–3, 7–5 ಅಂತರದ ನೇರಜಯಗಳಿಸಿದರು.
ಸೆರೆನಾ, 2018ರ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿಯೂಜಪಾನಿನ ನವೊಮಿ ಒಸ್ಕರಾ ಅವರ ಎದುರುಸೋಲು ಕಂಡಿದ್ದರು. ಈ ಪಂದ್ಯದಲ್ಲಿ ಸೆರೆನಾ ಜಯ ಸಾಧಿಸಿದ್ದರೆ24ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗಳಿಸಿದ ಸಾಧನೆಗೆ ಪಾತ್ರರಾಗುತ್ತಿದ್ದರು.
ಸೆಮಿಫೈನಲ್‌ನಲ್ಲಿ ಎಲಿನಾ ಸ್ವಿಟೋಲಿನಾ ಅವರನ್ನು 6–3, 6–1ರಲ್ಲಿ ಮಣಿಸಿದ್ದಸೆರೆನಾ 10ನೇ ಬಾರಿ ಅಮೆರಿಕ ಓಪನ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದರು. ಬಿಯಾಂಕ ಸೆಮಿಫೈನಲ್‌ನಲ್ಲಿ ಬೆಲಿಂದಾ ಬೆನ್ಸಿಕ್ ಅವರನ್ನು 7–6 (7/3), 7–5ರಲ್ಲಿ ಮಣಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.