ADVERTISEMENT

ಇತಿಹಾಸ ಬರೆದ ಜೊಕೊವಿಚ್; ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲೂ 90 ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಆಗಸ್ಟ್ 2024, 5:10 IST
Last Updated 29 ಆಗಸ್ಟ್ 2024, 5:10 IST
<div class="paragraphs"><p>ನೊವಾಕ್ ಜೊಕೊವಿಚ್</p></div>

ನೊವಾಕ್ ಜೊಕೊವಿಚ್

   

(ರಾಯಿಟರ್ಸ್ ಚಿತ್ರ)

ನ್ಯೂಯಾರ್ಕ್: ಅಮೆರಿಕ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೊವಿಚ್ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ADVERTISEMENT

ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಹೋರಾಟದಲ್ಲಿ 25ನೇ ಗ್ರ್ಯಾನ್ ಸ್ಲಾಮ್ ಎದುರು ನೋಡುತ್ತಿರುವ ಜೊಕೊವಿಚ್ ಅವರು, ಸರ್ಬಿಯಾದವರೇ ಆದ ಲಾಸ್ಲೋ ಜಿಯರ್ ವಿರುದ್ಧ 6-4, 6-4, 2-0ರ ಅಂತರದಲ್ಲಿ ಮೇಲುಗೈ ಸಾಧಿಸಿದರು.

ಮೂರನೇ ಸೆಟ್ ವೇಳೆ ಗಾಯಗೊಂಡ ವಿಶ್ವ ನಂ.109ನೇ ರ‍್ಯಾಂಕ್‌ನ ಲಾಸ್ಲೊ ಕಣದಿಂದ ಹಿಂದೆ ಸರಿದರು.

ಇತಿಹಾಸ ಬರೆದ ಜೊಕೊವಿಚ್...

37ನೇ ವರ್ಷದ ಜೊಕೊವಿಚ್, ಅಮೆರಿಕ ಓಪನ್ ಟೂರ್ನಿಯಲ್ಲಿ 90ನೇ ಗೆಲುವು ದಾಖಲಿಸಿದರು. ಆ ಮೂಲಕ ಇತಿಹಾಸ ಬರೆದಿರುವ ಜೊಕೊವಿಚ್, ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲೂ 90ನೇ ಗೆಲುವು ದಾಖಲಿಸಿರುವ ಜಗತ್ತಿನ ಮೊದಲ ಟೆನಿಸ್ ಆಟಗಾರ ಎನಿಸಿದರು.

  • ವಿಂಬಲ್ಡನ್: 97

  • ಆಸ್ಟ್ರೇಲಿಯನ್ ಓಪನ್: 94

  • ಫ್ರೆಂಚ್ ಓಪನ್: 96

  • ಅಮೆರಿಕ ಓಪನ್: 90

ಜೊಕೊವಿಚ್ ಅವರು ಮೂರನೇ ಸುತ್ತಿನಲ್ಲಿ, ಆಸ್ಟ್ರೇಲಿಯಾದ ಅಲೆಕ್ಸಿ ಪೊಪಿರಿನ್‌ ಸವಾಲನ್ನು ಎದುರಿಸಲಿದ್ದಾರೆ.

ಪ್ರಸಕ್ತ ಋತುವಿನಲ್ಲಿ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಬರ ನೀಗಿಸುವ ಇರಾದೆಯಲ್ಲಿರುವ ಜೊಕೊವಿಚ್, ಐದು ಬಾರಿ ಅಮೆರಿಕ ಓಪನ್ ಗೆದ್ದಿರುವ ದಿಗ್ಗಜ ರೋಜರ್ ಫೆಡರರ್ ದಾಖಲೆ ಸರಿಗಟ್ಟುವ ಗುರಿ ಹೊಂದಿದ್ದಾರೆ.

ನೊವಾಕ್ ಜೊಕೊವಿಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.