ನ್ಯೂಯಾರ್ಕ್:ಯುಎಸ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸರ್ಬಿಯಾದ ನೋವಾಕ್ ಜೊಕೊವಿಚ್ ಅವರು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಮಣಿಸಿಫೈನಲ್ ತಲುಪಿಸಿದ್ದಾರೆ.
ಟೆನಿಸ್ ಲೋಕದಮಹತ್ವದ ದಾಖಲೆಯೊಂದನ್ನು ನಿರ್ಮಿಸಲು ಜೋಕೊವಿಕ್‌ಗೆ ಇನ್ನು ಕೇವಲ ಒಂದು ಗೆಲುವಷ್ಟೇ ಬೇಕಾಗಿದೆ.ರಷ್ಯಾದ ಡಾನಿಲ್ ಮಡ್ವೆಡೆವ್ ಅವರ ವಿರುದ್ಧ ಭಾನುವಾರ (ಸೆ.11) ನಡೆಯಲಿರುವಫೈನಲ್‌ನಲ್ಲಿಜಯ ಗಳಿಸಿದರೆ,1969ರ ನಂತರ ಕ್ಯಾಲೆಂಡರ್ ವರ್ಷವೊಂದರಲ್ಲಿ ಎಲ್ಲ ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದ ಆಟಗಾರ ಎಂಬ ಹೆಗ್ಗಳಿಕೆಜೊಕೊ ಅವರದ್ದಾಗಲಿದೆ.
34 ವರ್ಷದ ಜೊಕೊವಿಚ್ ಅಮೆರಿಕ ಓಪನ್‌ನಲ್ಲಿ ಈವರೆಗೆ ಮೂರು ಬಾರಿಚಾಂಪಿಯನ್ ಆಗಿದ್ದಾರೆ. ಇಲ್ಲಿ ಮತ್ತೆ ಗೆದ್ದರೆ ಒಟ್ಟಾರೆ 21ನೇ ಗ್ರ್ಯಾನ್‌ಸ್ಲಾಂ ಜಯಿಸಿದ ಸಾಧನೆ ಮಾಡಲಿದ್ದು,ಹೊಸ ದಾಖಲೆಯೂ ನಿರ್ಮಾಣವಾಗಲಿದೆ. ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಮತ್ತು ಸ್ಪೇನ್‌ನ ರಫೆಲ್ ನಡಾಲ್ ಜೊತೆ ಜೊಕೊವಿಚ್ ಸದ್ಯ ಪುರುಷರ ಸಿಂಗಲ್ಸ್‌ನಲ್ಲಿ ಅತಿಹೆಚ್ಚು (20) ಗ್ರ್ಯಾನ್‌ಸ್ಲಾಂಗೆದ್ದ ಆಟಗಾರ ಎಂಬ ಶ್ರೇಯವನ್ನು ಹಂಚಿಕೊಂಡಿದ್ದಾರೆ.
ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್ ಕೂಟದ ಸೆಮಿಫೈನಲ್‌ನಲ್ಲಿ ಜ್ವೆರೆವ್ ಎದುರು ಸೋತಿದ್ದಸರ್ಬಿಯನ್ ಆಟಗಾರ, ಶುಕ್ರವಾರ ನಡೆದ ಜಿದ್ದಾಜಿದ್ದಿಯ ಸೆಮಿಫೈನಲ್ ಹೋರಾಟದಲ್ಲಿ 4-6, 6-2, 6-4, 4-6, 6-2ಅಂತರದಿಂದ ಗೆಲುವು ಕಂಡರು. ಅಂದಹಾಗೆ ಇದು, ಜೊಕೊವಿಚ್‌ಗೆಸತತ 27ನೇ ಜಯ.
ಗ್ರ್ಯಾನ್‌ಸ್ಲಾಂ ಇತಿಹಾಸದ ಪುರುಷರ ವಿಭಾಗದಲ್ಲಿ 52 ವರ್ಷಗಳ ಹಿಂದೆ, 1969ರಲ್ಲಿ ರೋಡ್ ಲೇವರ್ ಒಂದು ಋತುವಿನ ಎಲ್ಲ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು. ಅದಾದ ನಂತರ ಈ ಸಾಧನೆ ಮಾಡಲು ಯಾರಿಗೂ ಸಾಧ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.