ADVERTISEMENT

ವಿಂಬಲ್ಡನ್‌ 2021: ಮರ್ರೆ ಓಟಕ್ಕೆ ಬ್ರೇಕ್‌, ಡೆನಿಸ್‌ ಶಪೊವಲೊವ್‌ ವಿರುದ್ಧ ಸೋಲು

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 5:51 IST
Last Updated 3 ಜುಲೈ 2021, 5:51 IST
ಟೆನ್ನಿಸ್‌ ಆ್ಯಂಡಿ ಮರ್ರೆ ಸಾಂದರ್ಭಿಕ ಚಿತ್ರ
ಟೆನ್ನಿಸ್‌ ಆ್ಯಂಡಿ ಮರ್ರೆ ಸಾಂದರ್ಭಿಕ ಚಿತ್ರ   

ಲಂಡನ್‌: ನೆಚ್ಚಿನ ತವರು ನೆಲದಲ್ಲಿ ಎರಡನೇ ಬಾರಿಗೆ ಚಾಂಪಿಯನ್‌ ಕನಸು ಕಂಡಿದ್ದ ಆ್ಯಂಡಿ ಮರ್ರೆಗೆ ಕೆನಡಾದ 22 ವರ್ಷದ ಆಟಗಾರ ಡೆನಿಸ್‌ ಶಪೊವಲೊವ್‌ ಆಘಾತ ನೀಡಿದ್ದಾರೆ. ಶುಕ್ರವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ 6-4 6-2 6-2 ಸೆಟ್‌ಗಳಿಂದ ಆ್ಯಂಡಿ ಮರ್ರೆ ಪರಾಭವಗೊಂಡಿದ್ದಾರೆ.

ಪ್ರಮುಖ ಸರ್ಜರಿಯಿಂದಾಗಿ 2017ರಿಂದ ಹೊರಗುಳಿದಿದ್ದ ಮಾಜಿ ನಂ.1 ಆಟಗಾರ ಪುನಃ ಮೈದಾನಕ್ಕೆ ಇಳಿದಿದ್ದು ಅಭಿಮಾನಿಗಳಿಗೆ ಭಾರಿ ಸಂತೋಷವಾಗಿತ್ತು. 34 ವರ್ಷದ ಮರ್ರೆ ವಿಂಬಲ್ಡನ್‌ 2021 ಪುರುಷರ ಸಿಂಗಲ್ಸ್‌ನಲ್ಲಿ ಎರಡು ಸುತ್ತು ವಿಜೇತರಾಗಿ ಮೂರನೇ ಸುತ್ತಿಗೆ ಅರ್ಹತೆ ಪಡೆದಾಗ ಅಭಿಮಾನಿಗಳು ಆ್ಯಂಡಿ ಮರ್ರೆ ಪ್ರಶಸ್ತಿ ಫೇವರಿಟ್‌ಗಳಲ್ಲಿ ಒಬ್ಬರೆಂದು ಥ್ರಿಲ್‌ ಆಗಿದ್ದರು.

ಸೋಮವಾರ ಮೊದಲ ಸುತ್ತಿನಲ್ಲಿ ಜಾರ್ಜಿಯಾದ ನಿಕೊಲಸ್‌ ಬಸಿಲಶ್‌ವಿಲಿ ಹಾಗೂ ಬುಧವಾರ ಎರಡನೇ ಸುತ್ತಿನಲ್ಲಿ ಜರ್ಮನಿಯ ಆಸ್ಕರ್‌ ಓಟ್‌ ವಿರುದ್ಧ ಆ್ಯಂಡಿ ಮರ್ರೆ ವಿಜೇತರಾಗಿದ್ದರು. ಲಂಡನ್‌ ಮತ್ತು ರಿಯೊ ಡಿ ಜೆನೈರೊ ಸಿಂಗಲ್ಸ್‌ ಚಾಂಪಿಯನ್‌ ಮರ್ರೆ ಟೊಕಿಯೊ ಒಲಿಂಪಿಕ್‌ನತ್ತ ಚಿತ್ತವಿರಿಸಲಿದ್ದಾರೆ.

ADVERTISEMENT

ಆ್ಯಂಡಿ ಮರ್ರೆ ಎಂಬ ದಿಗ್ಗಜರ ಜೊತೆ ಆಟವಾಡಬೇಕು ಎಂಬ ಕನಸು ನನಸಾಗಿದೆ. ಮರ್ರೆ ಸಾಧನೆಯನ್ನು ಇದುವರೆಗೆ ಯಾರೂ ಮಾಡಿಲ್ಲ. ಅವರು ನನ್ನಂತವರಿಗೆ ನೈಜ ಸ್ಪೂರ್ತಿ ಎಂದು ಕೆನಡಾದ ಯುವ ಆಟಗಾರ ಡೆನಿಸ್‌ ಪಂದ್ಯದ ನಂತರ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.