ಲಂಡನ್: ಸಕಾಲಕ್ಕೆ ದೈಹಿಕ ಕ್ಷಮತೆ ಮರಳಿ ಪಡೆಯಲು ವಿಫಲರಾದ ಇಂಗ್ಲೆಂಡ್‌ನ ಆ್ಯಂಡಿ ಮರ‍್ರೆ, ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್ಸ್‌ನ ಪುರುಷರ ಸಿಂಗಲ್ಸ್‌ನಿಂದ ಮಂಗಳವಾರ ಹಿಂದೆಸರಿದರು.
37 ವರ್ಷ ವಯಸ್ಸಿನ ಮರ‍್ರೆ ಅವರು ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಎರಡು ಬಾರಿ (2013 ಮತ್ತು 2016ರಲ್ಲಿ) ಚಾಂಪಿಯನ್ ಆಗಿದ್ದರು. ಕೊನೆಯ ಸಲ ಇಲ್ಲಿ ಆಡಿ ವಿದಾಯ ಹೇಳುವ ಬಯಕೆ ಹೊಂದಿದ್ದರು.
ಅವರ ಬದಲು ಅರ್ಹತಾ ಸುತ್ತಿನ ‘ಲಕ್ಕೀ ಲೂಸರ್’ ಎನಿಸಿದ ಬೆಲ್ಜಿಯಂನ ಡೇವಿಡ್ ಗೊಫಿನ್ ಇಲ್ಲಿ ಆಡುವ ಅವಕಾಶ ಪಡೆದಿದ್ದಾರೆ.
ಮರ‍್ರೆ ಹಿಂದೆ ಸರಿದಿರುವ ಕಾರಣ ಟೆನಿಸ್‌ನ ‘ಬಿಗ್ ಫೋರ್’ ಆಟಗಾರರಲ್ಲಿ ನೊವಾಕ್ ಜೊಕೊವಿಚ್ ಮಾತ್ರ ಕಣದಲ್ಲಿ ಉಳಿದಂತಾಗಿದೆ. ಅವರಿಗೂ ಈಗ 37 ವರ್ಷ ವಯಸ್ಸು. ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗೆ ಅವರು ಪ್ರಯತ್ನಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.