ಲಂಡನ್: ಭಾರತೀಯ ಟೆನಿಸ್ ರಂಗದ ಡಬಲ್ಸ್ ತಾರೆ ರೋಹನ್ ಬೋಪಣ್ಣ ಅವರನ್ನು ವಿಂಬಲ್ಡನ್ ಕನ್ನಡದಲ್ಲೇ ಟ್ವೀಟ್ ಮಾಡುವ ಮೂಲಕ ಅಭಿನಂದಿಸಿದೆ.
ವಿಂಬಲ್ಡನ್ ಸಾಮಾಜಿಕ ಮಾಧ್ಯಮಗಳಲ್ಲಿ 'ಭಾರತದ ಸೂಪರ್ ಸ್ಟಾರ್' ಎಂದು ರೋಹನ್ ಬೋಪಣ್ಣ ಅವರನ್ನು ಕೊಂಡಾಡಿದೆ.
ಇದು ಕನ್ನಡದ ಅಭಿಮಾನಿಗಳ ಖುಷಿಗೆ ಕಾರಣವಾಗಿದ್ದು, ಬೆಂಗಳೂರು ಎಫ್‌ಸಿ ಕೂಡ, ಬೋಪಣ್ಣ ಅವರನ್ನು 'ನಮ್ಮ ಹೆಮ್ಮೆ' ಎಂದು ಪ್ರತಿಕ್ರಿಯಿಸಿದೆ.
ಅಂದ ಹಾಗೆ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ 7–5, 6–3 ರಲ್ಲಿ ಯೊಹಾನಸ್ ಮಂಡೇ–ಜೇಕಬ್ ಫೆರ್ನೆಲಿ ಅವರನ್ನು ಮಣಿಸಿ ಪ್ರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.