ಲಂಡನ್: ಝೆಕ್ ಗಣರಾಜ್ಯದ ಬಾರ್ಬೊರಾ ಕ್ರೆಚಿಕೋವಾ ಶನಿವಾರ ನಡೆದ ವಿಂಬಲ್ಡನ್ ಟೆನಿಸ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಇಟಲಿಯ ಜಾಸ್ಮಿನ್ ಪಾವೊಲಿನಿ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು. ಇದು ಕ್ರೆಚಿಕೋವಾ ಅವರಿಗೆ ಎರಡನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ.
31ನೇ ಶ್ರೇಯಾಂಕದ ಕ್ರೆಚಿಕೋವಾ 6–2, 2–6, 6–4 ರಿಂದ ಏಳನೇ ಶ್ರೇಯಾಂಕದ ಎದುರಾಳಿಯ ಮೇಲೆ ಜಯಗಳಿಸಿದರು. 28 ವರ್ಷದ ಝೆಕ್ ಆಟಗಾರ್ತಿ 2021ರ ಫ್ರೆಂಚ್ ಓಪನ್ ಟೂರ್ನಿಯಲ್ಲೂ ಸಿಂಗಲ್ಸ್ ಚಾಂಪಿಯನ್ ಆಗಿದ್ದರು.
ವಿಂಬಲ್ಡನ್ ಫೈನಲ್ ತಲುಪಿದ್ದ ಇಟಲಿಯ ಮೊದಲ ಆಟಗಾರ್ತಿ ಎನಿಸಿದ್ದ ಪಾವೊಲಿನಿ ಸತತವಾಗಿ ಎರಡು ಗ್ರ್ಯಾನ್‌ಸ್ಲಾಮ್ ಫೈನಲ್ ಸೋತಂತಾಗಿದೆ. ಮೇ–ಜೂನ್ ತಿಂಗಳು ನಡೆದ ಫ್ರೆಂಚ್ ಓಪನ್‌ನಲ್ಲೂ ಅವರು ಫೈನಲ್ ತಲುಪಿದ್ದು, ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್ (ಪೋಲೆಂಡ್) ಅವರೆದುರು ಸೋತಿದ್ದರು.
ಪುರುಷರ ಸಿಂಗಲ್ಸ್ ಫೈನಲ್ ಭಾನುವಾರ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.