ADVERTISEMENT

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ಕೆರ್ಬರ್‌, ನಿಶಿಕೋರಿ ಶುಭಾರಂಭ

ಬ್ರೇಡನ್‌ ಶುನರ್‌, ಸ್ಯಾಮ್‌ ಕ್ವೆರಿಗೆ ಗೆಲುವು

ಏಜೆನ್ಸೀಸ್
Published 2 ಜುಲೈ 2019, 20:00 IST
Last Updated 2 ಜುಲೈ 2019, 20:00 IST
ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು –ರಾಯಿಟರ್ಸ್‌ ಚಿತ್ರ
ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದರು –ರಾಯಿಟರ್ಸ್‌ ಚಿತ್ರ   

ಲಂಡನ್‌: ಹಾಲಿ ಚಾಂಪಿಯನ್‌ ಏಂಜಲಿಕ್‌ ಕೆರ್ಬರ್‌ ಮತ್ತು ಜಪಾನ್‌ನ ಕೀ ನಿಶಿಕೋರಿ ಅವರು ಋತುವಿನ ಮೂರನೇ ಗ್ರ್ಯಾನ್‌ಸ್ಲಾಮ್‌ ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಸೆಂಟರ್‌ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಕೆರ್ಬರ್‌ 6–4, 6–3 ನೇರ ಸೆಟ್‌ಗಳಿಂದ ತಮ್ಮದೇ ದೇಶದ ತತಜಾನ ಮರಿಯಾ ಅವರನ್ನು ಮಣಿಸಿದರು.

ಒಂದು ಗಂಟೆ 21 ನಿಮಿಷ ನಡೆದ ಈ ಪೈಪೋಟಿಯಲ್ಲಿ ಕೆರ್ಬರ್‌ ಒಟ್ಟು ಏಳು ಬ್ರೇಕ್ ಪಾಯಿಂಟ್ಸ್‌ ಕಲೆಹಾಕಿದರು.

ADVERTISEMENT

ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾದ ಆ್ಯಷ್ಲೆ ಬಾರ್ಟಿ 6–4, 6–2ರಲ್ಲಿ ಚೀನಾದ ಜೆಂಗ್‌ ಸಾಸೈ ಎದುರು ಗೆದ್ದರು.

ವೀನಸ್‌ಗೆ ಆಘಾತ: ಸೋಮವಾರ ರಾತ್ರಿ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ವೀನಸ್‌ ವಿಲಿಯಮ್ಸ್‌ ಆಘಾತ ಕಂಡರು.

ಅಮೆರಿಕದವರೇ ಆದ ಕೋರಿ ಗಾಫ್‌ 6–4, 6–4ರಲ್ಲಿ ವೀನಸ್‌ಗೆ ಸೋಲಿನ ರುಚಿ ತೋರಿಸಿದರು.

ರುಮೇನಿಯಾದ ಸಿಮೊನಾ ಹಲೆಪ್‌ 6–4, 7–5ರಲ್ಲಿ ಅಲಿಯಕ್ಸಾಂಡ್ರ ಸಸನೊವಿಚ್‌ ಅವರನ್ನು ಮಣಿಸಿದರೆ, ವಿಕ್ಟೋರಿಯಾ ಅಜರೆಂಕಾ 6–4, 6–4ರಲ್ಲಿ ಅಲೈಜ್‌ ಕಾರ್ನೆಟ್‌ ಎದುರು ಗೆದ್ದರು.

ಮಂಗಳವಾರದ ಇತರ ಪಂದ್ಯಗಳಲ್ಲಿ ಸ್ಲೋನ್ ಸ್ಟೀಫನ್ಸ್‌ 6–2, 6–4ರಲ್ಲಿ ಟೈಮಿ ಬ್ಯಾಕ್‌ಸಿಂಜಿಕಿ ವಿರುದ್ಧವೂ, ಲೌರಾ ಸಿಗ್ಮಂಡ್‌ 6–2, 6–4ರಲ್ಲಿ ಕೇಟಿ ಸ್ವಾನ್‌ ಎದುರೂ, ಬೆಲಿಂದಾ ಬೆನ್‌ಸಿಸ್‌ 6–2, 6–3ರಲ್ಲಿ ಅನಸ್ತೇಸಿಯಾ ಪ್ಯಾವಲ್ಯೂಚೆಂಕೊವಾ ಮೇಲೂ, ಮಗ್ದಾ ಲಿನೆಟ್‌ 6–0, 7–6ರಲ್ಲಿ ಅನಾ ಕ್ಯಾಲಿನ್ಸ್‌ಕಯಾ ವಿರುದ್ಧವೂ, ಲೌರೆನ್‌ ಡೇವಿಸ್‌ 6–3, 6–2ರಲ್ಲಿ ಕ್ಯಾತರಿನಾ ಕೊಜಲೊವಾ ಮೇಲೂ, ಕೈಯಾ ಕನೆಪಿ 5–7, 7–5, 6–4ರಲ್ಲಿ ಸ್ಟೆಫಾನಿ ವೋಗೆಲ್‌ ಎದುರೂ, ಮೋನಿಕಾ ನಿಕುಲೆಸ್ಕು 2–6, 6–2, 7–5ರಲ್ಲಿ ಆ್ಯಂಡ್ರಿಯಾ ಪೆಟ್ಕೊವಿಚ್‌ ಮೇಲೂ, ಅಲಿಸನ್‌ ವ್ಯಾನ್‌ ಉಯೆತ್‌ವಾಂಕ್‌ 6–4, 4–6, 6–2ರಲ್ಲಿ ಸ್ವೆಟ್ಲಾನ ಕುಜ್ನೆತ್ಸೋವಾ ವಿರುದ್ಧವೂ, ಕ್ಯಾತರಿನಾ ಸಿನಿಯಾಕೊವಾ 2–6, 6–1, 6–1ರಲ್ಲಿ ಏಕ್ತರಿನಾ ಅಲೆಕ್ಸಾಂಡ್ರೋವಾ ಮೇಲೂ, ವಾಂಗ್‌ ಕ್ವಿಯಾಂಗ್‌ 6–2, 6–2ರಲ್ಲಿ ವೆರಾ ಲ್ಯಾಪ್ಕೊ ವಿರುದ್ಧವೂ ಗೆದ್ದರು.

ನಿಶಿಕೋರಿಗೆ ಜಯ: ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪೈಪೋಟಿಯಲ್ಲಿ ಕೀ ನಿಶಿಕೋರಿ 6–4, 7–6, 6–4ರಲ್ಲಿ ಥೀಗೊ ಮೊಂಟೀರೊ ಮೇಲೆ ಗೆದ್ದರು.

ಸ್ಯಾಮ್‌ ಕ್ವೆರಿ 6–7, 7–6, 6–3, 6–0ರಲ್ಲಿ ಡಾಮಿನಿಕ್‌ ಥೀಮ್‌ಗೆ ಆಘಾತ ನೀಡಿದರು.

ಬ್ರೇಡನ್‌ ಶುನರ್‌ 2–6, 4–6, 4–6ರಲ್ಲಿ ಮಾರ್ಕಸ್‌ ಬಗ್ದಾತಿಸ್‌ ಎದುರು ಮಣಿದರು.

ಇತರ ಪಂದ್ಯಗಳಲ್ಲಿ ನಿಕೊಲಸ್‌ ಬಾಸಿಲಸ್ವಿಲಿ 2–6, 4–6, 6–4, 6–4, 8–6ರಲ್ಲಿ ಜೇಮ್ಸ್‌ ವಾರ್ಡ್‌ ಎದುರೂ, ಅಲೆಕ್ಸ್‌ ಡಿ ಮಿನೌರ್‌ 6–0, 6–4, 7–6ರಲ್ಲಿ ಮಾರ್ಕೊ ಸೆಚಿನಾಟೊ ಮೇಲೂ, ನಿಕ್‌ ಕಿರ್ಗಿಯೊಸ್‌ 7–6, 3–6, 7–6, 0–6, 6–1ರಲ್ಲಿ ಜೋರ್ಡನ್‌ ಥಾಂಪ್ಸನ್‌ ವಿರುದ್ಧವೂ, ಸ್ಟೀವ್‌ ಜಾನ್ಸನ್‌ 6–4, 6–2, 6–3ರಲ್ಲಿ ಅಲ್ಬರ್ಟ್‌ ರಾಮೊಸ್‌ ವಿನೊಲಸ್‌ ಮೇಲೂ, ಡಾನ್ ಇವಾನ್ಸ್‌ 6–3, 7–6, 6–3ರಲ್ಲಿ ಫೆಡೆರಿಕೊ ಡೆಲ್ಬೊನಿಸ್‌ ಎದುರೂ ಗೆಲುವಿನ ತೋರಣ ಕಟ್ಟಿದರು.

ಪ್ರಜ್ಞೇಶ್‌ಗೆ ನಿರಾಸೆ: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಮೊದಲ ಸುತ್ತಿನಲ್ಲೇ ಸೋತರು.

ಸೋಮವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಎಡಗೈ ಆಟಗಾರ ಪ್ರಜ್ಞೇಶ್‌ 6–7, 4–6, 2–6ರಲ್ಲಿ ಕೆನಡಾದ ಮಿಲೊಸ್‌ ರಾನಿಕ್‌ಗೆ ಮಣಿದರು.

ಈ ಹೋರಾಟದಲ್ಲಿ ಪ್ರಜ್ಞೇಶ್‌ ಐದು ಏಸ್‌ಗಳನ್ನು ಸಿಡಿಸಿದರು. ಎರಡು ಡಬಲ್‌ ಫಾಲ್ಟ್‌ಗಳನ್ನು ಮಾಡಿದ ಅವರು ಎದುರಾಳಿಯ ಸರ್ವ್‌ ಮುರಿಯಲು ವಿಫಲರಾದರು.

ಸೋಮವಾರ ನಡೆದಿದ್ದ ಸಿಂಗಲ್ಸ್‌ ಪಂದ್ಯಗಳಲ್ಲಿ ಜಪಾನ್‌ನ ನವೊಮಿ ಒಸಾಕ ಹಾಗೂ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅವರು ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರ ಬಿದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.