ಸಿಡ್ನಿ: ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆ್ಯಶ್ಲಿ ಬಾರ್ಟಿ ಅವರು ವರ್ಷಾಂತ್ಯದಲ್ಲಿ ನಡೆಯಲಿರುವ ಡಬ್ಲ್ಯುಟಿಎ ಫೈನಲ್ಸ್‌ನಿಂದ ಹಿಂದೆ ಸರಿದಿದ್ದಾರೆ. ಆಸ್ಟ್ರೇಲಿಯಾ ಓಪನ್ ಟೂರ್ನಿಗೆ ಸಜ್ಜುಗೊಳ್ಳಲು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಬಾರ್ಟಿ ಸೆಪ್ಟೆಂಬರ್‌ನಲ್ಲಿ ನಡೆದ ಅಮೆರಿಕ ಓಪನ್‌ನ ಮೂರನೇ ಸುತ್ತಿನಲ್ಲಿ ಸೋತ ಬಳಿಕ ಅವರು ಯಾವುದೇ ಟೂರ್ನಿಯಲ್ಲಿ ಆಡಿಲ್ಲ. ಈ ವರ್ಷದ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟ್ರೋಫಿ ಸೇರಿ ಐದು ಪ್ರಶಸ್ತಿಗಳನ್ನು ಜಯಿಸಿದ್ದಾರೆ.
‘ಮೆಕ್ಸಿಕೊದಲ್ಲಿ ನಿಗದಿಯಾಗಿರುವ ಡಬ್ಲ್ಯುಟಿಎ ಫೈನಲ್ಸ್ ಸೇರಿದಂತೆ ಈ ವರ್ಷದಲ್ಲಿ ಬಾಕಿಯಿರುವ ಯಾವುದೇ ಟೂರ್ನಿಗಳಲ್ಲಿ ನಾನು ಕಣಕ್ಕಿಳಿಯುತ್ತಿಲ್ಲ. ಇದೊಂದು ಕಠಿಣ ನಿರ್ಧಾರ. ನನಗೆ ವಿರಾಮ ಬೇಕಾಗಿದೆ. ಆಸ್ಟ್ರೇಲಿಯಾ ಓಪನ್ ವೇಳೆಗೆ ಇನ್ನಷ್ಟು ಬಲಿಷ್ಠವಾಗಬೇಕು‘ ಎಂದು ಬಾರ್ಟಿ ಹೇಳಿದ್ದಾರೆ.
2019ರ ಡಬ್ಲ್ಯುಟಿಎ ಟೂರ್ನಿಯಲ್ಲಿ ಬಾರ್ಟಿ ಟ್ರೋಫಿ ಗೆದ್ದುಕೊಂಡಿದ್ದರು. ಕೊರೊನಾ ಕಾರಣದಿಂದಾಗಿ 2020ರ ಆವೃತ್ತಿ ನಡೆದಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.