ADVERTISEMENT

CWC 2023: ನೆದರ್ಲೆಂಡ್ಸ್‌ಗೆ 400 ರನ್‌ಗಳ ಗೆಲುವಿನ ಗುರಿ ನೀಡಿದ ಆಸ್ಟ್ರೇಲಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2023, 13:00 IST
Last Updated 25 ಅಕ್ಟೋಬರ್ 2023, 13:00 IST
<div class="paragraphs"><p>ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ಗಳಾದ ಡೇವಿಡ್ ವಾರ್ನರ್‌ ಹಾಗೂ ಮಿಚೇಲ್‌ ಮಾರ್ಷ್‌</p></div>

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ಗಳಾದ ಡೇವಿಡ್ ವಾರ್ನರ್‌ ಹಾಗೂ ಮಿಚೇಲ್‌ ಮಾರ್ಷ್‌

   

ಚಿತ್ರ: ಪಿಟಿಐ

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನೆದರ್ಲೆಂಡ್ಸ್‌ಗೆ ಗೆಲ್ಲಲು ಆಸ್ಟ್ರೇಲಿಯಾ ಬೃಹತ್‌ ಮೊತ್ತದ ಗುರಿ ನೀಡಿದೆ

ADVERTISEMENT

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು ನೆದರ್ಲೆಂಡ್ಸ್ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತು. 

ಎಂದಿನ ಬ್ಯಾಟಿಂಗ್‌ ಲಯಕ್ಕೆ ಮರಳಿರುವ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 399 ರನ್‌ ಪೇರಿಸಿತು. ಈ ಪಂದ್ಯ ಗೆಲ್ಲಬೇಕಾದರೆ ನೆದರ್ಲೆಂಡ್ಸ್ 400 ರನ್‌ ಗಳಿಸಬೇಕಿದೆ.

ವಾರ್ನರ್‌ ಮತ್ತು ಮ್ಯಾಕ್ಸ್‌ವೆಲ್‌ ಶತಕ ಸಿಡಿಸಿದರು. ಹಾಗೇ ಸ್ಮಿತ್‌ ಮತ್ತು ಲಾಬುಶೇನ್‌ ಅರ್ಧ ಶತಕಗಳಿಸಿ ಗಮನ ಸೆಳೆದರು. ನೆದರ್ಲೆಂಡ್ಸ್  ಪರ ಲಾನ್ ವೀಕ್‌ 4 ವಿಕೆಟ್‌ ಪಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.