ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೇಗದ 50 ವಿಕೆಟ್ ಗಳಿಸಿದ ದಾಖಲೆಗೆ ಭಾರತದ ವೇಗಿ ಮೊಹಮ್ಮದ್ ಶಮಿ ಭಾಜನರಾಗಿದ್ದಾರೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ಶಮಿ ಈ ಸ್ಮರಣೀಯ ದಾಖಲೆ ಬರೆದಿದ್ದಾರೆ.
ಮೊಹಮ್ಮದ್ ಶಮಿ 17ನೇ ಇನಿಂಗ್ಸ್‌ನಲ್ಲಿ 50 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
ಏಕದಿನ ವಿಶ್ವಕಪ್‌ನಲ್ಲಿ 50 ವಿಕೆಟ್ ಗಳಿಸಿದ ಭಾರತದ ಮೊದಲ ಬೌಲರ್ ಎಂಬ ಗೌರವಕ್ಕೂ ಶಮಿ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ ಏಕದಿನ ವಿಶ್ವಕಪ್‌ನಲ್ಲಿ 50 ವಿಕೆಟ್ ಗಳಿಸಿದ ಏಳನೇ ಬೌಲರ್ ಎನಿಸಿದ್ದಾರೆ.
ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪಟ್ಟಿ:
ಗ್ಲೆನ್ ಮೆಕ್‌ಗ್ರಾಥ್: 71
ಮುತ್ತಯ್ಯ ಮುರಳೀಧರನ್: 68
ಮಿಚೆಲ್ ಸ್ಟಾರ್ಕ್: 59
ಲಸಿತ್ ಮಾಲಿಂಗ: 56
ವಾಸೀಂ ಅಕ್ರಮ್: 55
ಟ್ರೆಂಟ್ ಬೌಲ್ಟ್: 53
ಮೊಹಮ್ಮದ್ ಶಮಿ: 50
ಏಕದಿನ ವಿಶ್ವಕಪ್‌ನಲ್ಲಿ ವೇಗದ 50 ವಿಕೆಟ್ ಸಾಧನೆ (ಇನ್ನಿಂಗ್ಸ್):
ಮೊಹಮ್ಮದ್ ಶಮಿ: 17
ಮಿಚೆಲ್ ಸ್ಟಾರ್ಕ್: 19
ಲಸಿತ್ ಮಾಲಿಂಗ: 25
ಟ್ರೆಂಟ್ ಬೌಲ್ಟ್: 28
https://twitter.com/BCCI/status/1724813197386092897
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.